ಹಿರಿಯೂರು: ತಾಲ್ಲೂಕಿನ ಕೂನಿಕೆರೆ ಗ್ರಾಮದ ಕಾಟಮಲಿಂಗೇಶ್ವರ ದೇಗುಲದ ಜೀರ್ಣೋದ್ಧಾರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗುರುವಾರ ₹ 2 ಲಕ್ಷ ದೇಣಿಗೆ ನೀಡಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ನವೀನ್ ಅವರು ದೇವಸ್ಥಾನ ಸಮಿತಿಯವರಿಗೆ ಡಿಡಿ ವಿತರಿಸಿದರು.
ಧರ್ಮಸ್ಥಳ ಸಂಸ್ಥೆಯು ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರದ ಜೊತೆಗೆ ನಿರ್ಗತಿಕರಿಗೆ ಮಾಸಾಶನ, ವಸತಿ ಸೌಲಭ್ಯ ಕಲ್ಪಿಸುತ್ತಿದೆ. ಕೆರೆಗಳ ಹೂಳು ತೆಗೆಯಿಸುವ ಮೂಲಕ ರೈತರ ನೆರವಿಗೆ ನಿಂತಿದೆ. ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸಾಲಸೌಲಭ್ಯ ನೀಡುವ ಮೂಲಕ ಸಣ್ಣಪುಟ್ಟ ಉದ್ಯಮ ನಡೆಸಲು ಪ್ರೋತ್ಸಾಹಿಸುತ್ತಿದೆ ಎಂದು ಯೋಜನಾಧಿಕಾರಿ ನವೀನ್ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಮೇಲ್ವಿಚಾರಕ ಮಂಜುನಾಥ್, ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್. ಸೋಮಲಿಂಗಪ್ಪ, ಉಪಾಧ್ಯಕ್ಷ ಕೆ.ಜಿ. ಹನುಮಂತರಾಯ, ಜಿ. ಶಿವಾನಂದ, ಎಚ್. ಲಿಂಗರಾಜ್, ಹನುಮಪ್ಪ, ಗಿರೀಶ್, ಗೋವಿಂದರಾಯ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.