ADVERTISEMENT

ಸಿರಿಗೆರೆ | ಮಳೆಗಾಗಿ ಪ್ರಾರ್ಥನೆ: ಸಿರಿಗೆರೆಯಲ್ಲಿ ನಾಳೆ ಪರುವು

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 16:08 IST
Last Updated 23 ಜೂನ್ 2024, 16:08 IST
ಕಾಶಿ ಮಹಾಲಿಂಗ ಸ್ವಾಮೀಜಿ
ಕಾಶಿ ಮಹಾಲಿಂಗ ಸ್ವಾಮೀಜಿ   

ಸಿರಿಗೆರೆ: ಮಳೆಗಾಗಿ ಪ್ರಾರ್ಥಿಸಿ, ತರಳಬಾಳು ಬೃಹನ್ಮಠದ ವಿರಕ್ತ ಚೇತನರಾಗಿದ್ದ ಕಾಶಿ ಮಹಾಲಿಂಗ ಸ್ವಾಮೀಜಿ ಪರುವು ಮಾವಿನ ತೋಪಿನ ಅವರ ಗದ್ದುಗೆ ಆವರಣದಲ್ಲಿ ಸೋಮವಾರ ನಡೆಯಲಿದೆ.

ಸಿರಗೆರೆ ಭಾಗದಲ್ಲಿ ಮಳೆ ಕೊರತೆ ಉಂಟಾದಾಗ ಜನರು ಕಾಶಿ ಗುರುಗಳ ಭಾವಚಿತ್ರ ಮೆರವಣಿಗೆ ಮಾಡುವುದು, ಅವರ ಹೆಸರಿನಲ್ಲಿ ಧಾರ್ಮಿಕ ಕಾರ್ಯ ನಡೆಸುವುದು, ಅವರ ಗದ್ದುಗೆ ಪೂಜೆ ಮಾಡಿ ದಾಸೋಹ ಏರ್ಪಡಿಸುವುದು ವಾಡಿಕೆ. ಇಂತಹ ಎಲ್ಲ ಸಂದರ್ಭಗಳಲ್ಲಿಯೂ ಜನರ ನಿರೀಕ್ಷೆಗೆ ಅನುಗುಣವಾಗಿ ಮಳೆಯಾಗಿ ಕೃಷಿಕರನ್ನು ಕೈ ಹಿಡಿದಿರುವುದು ಅವರ ಮೇಲಿನ ಅನನ್ಯ ಶ್ರದ್ಧಾ ಭಕ್ತಿಗೆ ಕಾರಣವಾಗಿದೆ.

ಹಾಗಾಗಿ ಭಾನುವಾರ ರಾತ್ರಿಯಿಂದಲೇ ಅವರ ಗದ್ದುಗೆ ಆವರಣದಲ್ಲಿ ಭಜನೆ ಏರ್ಪಡಿಸಲಾಗಿದೆ. ಸೋಮವಾರ ಬೆಳಗಿನ ಜಾವದಿಂದ ಅವರ ಸಮಾಧಿ ಮಂಟಪದಲ್ಲಿ ವಿಶೇಷ ಪೂಜಾದಿ ಕಾರ್ಯಕ್ರಮಗಳು ನಡೆಯಲಿವೆ. 

ADVERTISEMENT

ಪರುವು ಅಂಗವಾಗಿ ಸಿರಿಗೆರೆ ಹಾಗೂ ಸುತ್ತಮುತ್ತಲಿನ ಎಲ್ಲಾ ಹಳ್ಳಿಗಳ ಜನರಿಗೂ ಮಾವಿನ ತೋಪಿನ ಅವರ ಮಂಟಪದ ಬಳಿ ದಾಸೋಹ ಏರ್ಪಡಿಸಲಾಗಿದೆ. ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಭಕ್ತರ ಸಮ್ಮುಖದಲ್ಲಿ ದಾಸೋಹಕ್ಕೆ ಚಾಲನೆ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.