ಸೊಂಡೆಕೆರೆ (ಹಿರಿಯೂರು): ಸೊಂಡೆಕೆರೆ ಗ್ರಾಮದ ಮೈಲಾರ ಲಿಂಗೇಶ್ವರಸ್ವಾಮಿ ದೇವಸ್ಥಾನದಲ್ಲಿ ಬುಧವಾರ ದೋಣಿಪೂಜೆ ಸೇವೆಯನ್ನು ಗೊರವರು ನೆರವೇರಿಸಿದರು.
ಹಲವು ದಶಕಗಳಿಂದ ಯುಗಾದಿ ಚಂದ್ರದರ್ಶನದ ಮರುದಿನ ಬೆಳಿಗ್ಗೆ 8ರಿಂದ 10.30ರವರೆಗೆ ದೋಣಿ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ.
ಜನ–ಜಾನುವಾರಿಗೆ ಹೊಸ ವರ್ಷದಲ್ಲಿ ರೋಗಗಳು ಬರದಂತೆ ದೇವರು ಕಾಪಾಡಲಿ ಎಂಬುದು ಪೂಜೆಯ ಉದ್ದೇಶ ಎಂದು ಗ್ರಾಮದ ಮುಖಂಡ ಮಂಜುನಾಥ್ ತಿಳಿಸಿದರು.
ನವರಂಗ ಕಲ್ಲುಗಳು ಜೋಡಣೆ: ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೆಂಚಾಂಬದೇವಿ ದೇವಸ್ಥಾನದ ಗರ್ಭಗುಡಿ ನವರಂಗದ ಕಲ್ಲುಗಳನ್ನು ಯಂತ್ರ ಬಳಸಿ ಜೋಡಿಸಲಾಯಿತು. ದೇವಸ್ಥಾನ ಸಮಿತಿಯವರು, ಗ್ರಾಮದ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.