ಹಿರಿಯೂರು: ‘ಈ ಬಾರಿಯ ಎಸ್‌ಎಸ್ಎಲ್‌ಸಿ ಫಲಿತಾಂಶವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ದಸರೆ ರಜೆಯ ಅವಧಿಯಲ್ಲಿ ಒಂದು ವಾರ ಎಲ್ಲ ಶಾಲೆಗಳಲ್ಲೂ ಕ್ರ್ಯಾಶ್ ಕೋರ್ಸ್ ಅನುಷ್ಠಾನ ಮಾಡುತ್ತಿದ್ದು, ಟಾರ್ಗೆಟ್ 50 ಪಾಸಿಂಗ್ ಪ್ಯಾಕೇಜ್‌ಗೆ ಈ ಕಾರ್ಯಕ್ರಮ ಸಹಕಾರಿಯಾಗಲಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ತಿಪ್ಪೇಸ್ವಾಮಿ ಹೇಳಿದರು.
ನಗರದ ಕುವೆಂಪು ಬಡಾವಣೆಯಲ್ಲಿರುವ ಸತ್ಯಸಾಯಿ ಪ್ರೌಢಶಾಲೆಯಲ್ಲಿ ಮಂಗಳವಾರ ದಸರಾ ರಜಾವಧಿಯ ಶಿಬಿರದ ಅನುಷ್ಠಾನದ ಪರಿಶೀಲನೆ ನಡೆಸಿದ ಅವರು ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಪಾಸಿಂಗ್ ಪ್ಯಾಕೇಜ್ ಬಗ್ಗೆ ಚರ್ಚಿಸಿದರು.
ಆರು ದಿನಗಳವರೆಗೆ ನಡೆಯಲಿರುವ ಈ ಶಿಬಿರದಲ್ಲಿ ವಿದ್ಯಾರ್ಥಿಗಳು ಸುಲಭವಾಗಿ ಉತ್ತೀರ್ಣವಾಗಲು ಅಗತ್ಯವಿರುವ ಅಂಕಗಳನ್ನು ಪಡೆಯಲು ಸರಳ ಪಠ್ಯ ವಸ್ತುವನ್ನು ಚೆನ್ನಾಗಿ ಕರಗತ ಮಾಡಿಕೊಳ್ಳುವ ವಿಧಾನದ ಬಗ್ಗೆ ಬಿಇಒ ಮಾರ್ಗದರ್ಶನ ನೀಡಿದರು.
ಶಾಲೆಯ ಮುಖ್ಯ ಶಿಕ್ಷಕ ಅರವಿಂದ್, ಸಹ ಶಿಕ್ಷಕ ವೆಂಕಟೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.