ADVERTISEMENT

ಶ್ರೀರಾಂಪುರ: ಬೀದಿ ನಾಯಿಗಳ ಹಾವಳಿಗೆ ಬೇಸತ್ತ ಸಾರ್ವಜನಿಕರು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 15:28 IST
Last Updated 19 ಸೆಪ್ಟೆಂಬರ್ 2024, 15:28 IST
ಶ್ರೀರಾಂಪುರ ಸಮೀಪದ ಬೆಲಗೂರು ಗ್ರಾಮದ ಮುಖ್ಯರಸ್ತೆಯಲ್ಲಿ ಬೀದಿನಾಯಿಗಳು ಗುಂಪಾಗಿ ಸಂಚರಿಸುತ್ತಿರುವುದು
ಶ್ರೀರಾಂಪುರ ಸಮೀಪದ ಬೆಲಗೂರು ಗ್ರಾಮದ ಮುಖ್ಯರಸ್ತೆಯಲ್ಲಿ ಬೀದಿನಾಯಿಗಳು ಗುಂಪಾಗಿ ಸಂಚರಿಸುತ್ತಿರುವುದು   

ಶ್ರೀರಾಂಪುರ: ಹೋಬಳಿಯ ಬೆಲಗೂರು ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.

ಬೆಲಗೂರು ಗ್ರಾಮದ ಮುಖ್ಯರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಕೆಲವೊಮ್ಮೆ ಹತ್ತಾರು ಬೀದಿ ನಾಯಿಗಳು ಗುಂಪು ಗುಂಪಾಗಿ ಅಡ್ಡಾಡುತ್ತಿರುತ್ತವೆ. ನಾಯಿಗಳಿಗೆ ಹೆದರಿ ಮಕ್ಕಳನ್ನು ಹೊರಗೆ ಆಟವಾಡಲು ಕಳುಹಿಸುವುದಕ್ಕೂ ಪಾಲಕರು ಭಯಪಡುತ್ತಿದ್ದಾರೆ. ವಾಹನ ಸವಾರರಿಗೆ ನಾಯಿಗಳು ಬೆನ್ನುಹತ್ತುತ್ತವೆ. ನಾಯಿಗಳು ಅಡ್ಡಬಂದು ವಾಹನ ಸವಾರರು ಬಿದ್ದು ಕೈಕಾಲು ಪೆಟ್ಟು ಮಾಡಿಕೊಂಡ ನಿದರ್ಶನಗಳೂ ಇವೆ. 

ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಗ್ರಾಮಾಡಳಿತ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.