ಚಿತ್ರದುರ್ಗ: ‘ಭಾವೈಕ್ಯ ಸಂಗಮ’ ಎಂದೇ ಹೆಸರಾಗಿರುವ ತರಳಬಾಳು ಹುಣ್ಣಿಮೆ ಮಹೋತ್ಸವ ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಜ. 28ರಿಂದ ಫೆ. 5ರವರೆಗೆ ನಡೆಯಲಿದೆ. ತರಳಬಾಳು ಮಠದ ಪೀಠಾಧಿಪತಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ 9 ದಿನ ಉತ್ಸವ ಜರುಗಲಿದೆ.
ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಸಿರಿಗೆರೆಯಿಂದ ಹೊರಟು ಜಗಳೂರು, ಉಜ್ಜಯಿನಿ ಮಾರ್ಗವಾಗಿ ಪುರಪ್ರವೇಶ ಮಾಡಲಿ
ದ್ದಾರೆ. ಶನಿವಾರ ಸಂಜೆ 6ಕ್ಕೆ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಧಾರ್ಮಿಕ ನೇತಾರರ ಆಶೀರ್ವಚನ, ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕೃಷಿ, ಮಹಿಳೆ, ಯುವ, ಮಠಾಧೀಶರು ಹಾಗೂ ಸಾಹಿತ್ಯ ಚಿಂತನಾ ಗೋಷ್ಠಿ ನಡೆಯಲಿದೆ.
ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್.ಯಡಿಯೂರಪ್ಪ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆ. 4ರಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ಫೆ. 5ರಂದು ಸಿಎಂ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ. ತರಳಬಾಳುಶ್ರೀ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಸದ್ಧರ್ಮ ಸಿಂಹಾಸನಾರೋಹಣ ನಡೆಯಲಿದೆ. ರಾಷ್ಟ್ರಸೇವೆ ಯಲ್ಲಿ ಹುತಾತ್ಮರಾದ ಕರ್ನಾಟಕದ 10 ವೀರಯೋಧರ ಕುಟುಂಬಕ್ಕೆ ಧನಸಹಾಯ ನೀಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.