ADVERTISEMENT

ಸರ್ಕಾರ ಅನುಮತಿಸಿದರೆ ಮಾತ್ರ ಕೊಟ್ಟೂರಿನಲ್ಲಿ ತರಳಬಾಳು ಹುಣ್ಣಿಮೆ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2021, 4:18 IST
Last Updated 18 ಡಿಸೆಂಬರ್ 2021, 4:18 IST
ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ   

ಭರಮಸಾಗರ: ಕೊಟ್ಟೂರಿನಲ್ಲಿ ತರಳಬಾಳು ಹುಣ್ಣಿಮೆ ಹಮ್ಮಿಕೊಳ್ಳಲು ತಾತ್ಕಾಲಿಕ ಸಿದ್ಧತೆ ಮಾಡಿಕೊಂಡಿರುವಂತೆ ಸೂಚನೆ ನಿಡಲಾಗಿದೆ. ಆದರೆ. ಸರ್ಕಾರ ಅನುಮತಿ ನೀಡಿದರೆ ಮಾತ್ರ ಕೊಟ್ಟೂರಿನಲ್ಲಿ ಕಾರ್ಯಕ್ರಮ ನಡೆಸಲಾಗುವುದು ಇಲ್ಲದಿದ್ದರೆ ಸಿರಿಗೆರೆಯಲ್ಲಿಯೇ ನಡೆಸಲಾಗುವುದು ಎಂದು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಬಿಚ್ಚುಗತ್ತಿ ಭರಮಣ್ಣ ನಾಯಕ ದೊಡ್ಡಕೆರೆ ಕೋಡಿ ಬಿದ್ದ ಕ್ಷಣವನ್ನು ವೀಕ್ಷಿಸಿದ ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಪೂರ್ವಯೋಜನೆಯಂತೆ ಕೊಟ್ಟೂರಿನಲ್ಲಿ ತರಳಬಾಳು ಹುಣ್ಣಿಮ ಕಾರ್ಯಕ್ರಮವನ್ನು 2022ರ ಫೆ. 8ರಿಂದ ನಡೆಸಲು ಸಿದ್ಧತೆ ಮಾಡಿಕೊಳ್ಳುವಂತೆ ಆ ಭಾಗದ ಜನರಿಗೆ ತಿಳಿಸಲಾಗಿದೆ. ಜನವರಿ ವೇಳೆಗೆ ಓಮೈಕ್ರಾನ್‌ ಹೆಚ್ಚುವ ಸೂಚನೆ ಇದ್ದು, ಅನುಮತಿ ದೊರೆತರೆ ಮಾತ್ರ ಕಾರ್ಯಕ್ರಮ ನಡೆಸಲಾಗುವುದು. ಸರ್ಕಾರದ ಆದೇಶಕ್ಕೆ ಮೀರಿ ಕಾರ್ಯಕ್ರಮ ಹಮ್ಮಿಕೊಳ್ಳುವುದಿಲ್ಲ ಎಂದು ಸ್ವಾಮೀಜಿ ಸ್ಪಷ್ಟಪಡಿಸಿದರು.

ADVERTISEMENT

‘ದೊಡ್ಡಕೆರೆಗೆ ನೀರು ಬಂದಿದ್ದು, ಮುಂದಿನ ದಿನಗಳಲ್ಲಿ 42 ಕೆರೆಗಳಿಗೂ ನೀರು ಹರಿಯಲಿದೆ. ಇದರ ಸ್ಮರಣಾರ್ಥ ಭರಮಸಾಗರದಲ್ಲಿಯೂ ತರಳಬಾಳು ಹುಣ್ಣಿಮೆ ನಡೆಸಬೇಕು. ಭರಮಸಾಗರವನ್ನು ತಾಲ್ಲೂಕು ಕೇಂದ್ರವಾಗಿಸಲು ಪ್ರಯತ್ನಿಸಬೇಕು’ ಎಂದು ಸ್ಥಳೀಯರು ಮನವಿ ಮಾಡಿದರು.

‘ಈಗ ಆ ಪ್ರಸ್ತಾಪ ಬೇಡ. ಮುಂದೆ ನೊಡೋಣ’ ಎಂದು ಸ್ವಾಮೀಜಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.