ADVERTISEMENT

ರೌಡಿಗಳ ಬೆದರಿಕೆ: ತಿಪ್ಪಾರೆಡ್ಡಿ ಆರೋಪ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 18:38 IST
Last Updated 26 ಡಿಸೆಂಬರ್ 2020, 18:38 IST
ಒಂದೇ ರೀತಿಯ ದಿರಿಸು ತೊಟ್ಟು ರೌಡಿಗಳಂತೆ ಅನುಮಾನಾಸ್ಪದವಾಗಿ ಕಂಡುಬಂದವರನ್ನು ಪೊಲೀಸರು ಹಾಗೂ ಶಾಸಕ ಬಿ.ಎಚ್‌. ತಿಪ್ಪಾರೆಡ್ಡಿ ವಿಚಾರಣೆ ಮಾಡಿದರು.
ಒಂದೇ ರೀತಿಯ ದಿರಿಸು ತೊಟ್ಟು ರೌಡಿಗಳಂತೆ ಅನುಮಾನಾಸ್ಪದವಾಗಿ ಕಂಡುಬಂದವರನ್ನು ಪೊಲೀಸರು ಹಾಗೂ ಶಾಸಕ ಬಿ.ಎಚ್‌. ತಿಪ್ಪಾರೆಡ್ಡಿ ವಿಚಾರಣೆ ಮಾಡಿದರು.   

ಚಿತ್ರದುರ್ಗ: ‘ಹಾಳಾದ ರಸ್ತೆಯೊಂದನ್ನು ದುರಸ್ತಿ ಪಡಿಸಲು ಒತ್ತಾಯಿಸಿದ ನನಗೆ ಶನಿವಾರ ರೌಡಿಗಳು ಬೆದರಿಕೆ ಹಾಕಿದ್ದಾರೆ’ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಆರೋಪಿಸಿದ್ದಾರೆ.

ತಾಲ್ಲೂಕಿನ ಇಂಗಳದಾಳು ಲಂಬಾಣಿಹಟ್ಟಿ ಗ್ರಾಮದ ರಸ್ತೆ ಹಾಳಾ ಗಿರುವ ಕುರಿತು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದಿದ್ದರು. ಹಿಂದಿನ ವಾರ ವಷ್ಟೇ ಸ್ಥಳಕ್ಕೆ ಭೇಟಿ ನೀಡಿ ಶಾಸಕರು ಪರಿಶೀಲಿಸಿದ್ದರು. ಶನಿವಾರ ಮತ್ತೆ ಭೇಟಿ ನೀಡಿದ್ದ ವೇಳೆರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಉಪಗುತ್ತಿಗೆ ಪಡೆದ ಕಂಪನಿಯೊಂದರ ವ್ಯವಸ್ಥಾಪಕರ ಜೊತೆ ಒಂದೇ ರೀತಿಯ ಬಟ್ಟೆ ಧರಿಸಿದ್ದ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕರ ಗುಂಪು ಅಲ್ಲಿತ್ತು.

ಇದನ್ನು ಕಂಡ ಶಾಸಕರು ಕಂಪ ನಿಯ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದು ಕೊಂಡರು. ‘ಹೆದರಿಸಲು ರೌಡಿಗಳನ್ನು ಕರೆಸಿದ್ದೀಯಾ? ಮತ್ತೊಬ್ಬರ ಒತ್ತಡ, ಹೆದರಿಕೆ ಯಾವುದಕ್ಕೂ ಜಗ್ಗುವುದಿಲ್ಲ. ನೂತನ ರಸ್ತೆ ನಿರ್ಮಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

ಬೆದರಿಕೆಗೆ ಪ್ರಯತ್ನಿಸಿದ ರೌಡಿಗಳ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದೂ ಹೇಳಿದರು.

‘ಮೂರು ತಿಂಗಳ ಹಿಂದೆಯಷ್ಟೇ ಮಾಡಿದ್ದ ರಸ್ತೆ ಹಾಳಾಗಿದೆ. ದುರಸ್ತಿ ಪಡಿಸುವಂತೆ ಸೂಚನೆ ನೀಡಿದ್ದೆ. ಇನ್ನೂ ಏಕೆ ಕ್ರಮ ಕೈಗೊಂಡಿಲ್ಲ’ ಎಂದು ಶಾಸಕರು ಕಂಪನಿಯ ಅಧಿಕಾರಿಯನ್ನು ಪ್ರಶ್ನಿಸಿದರು.

ಕಂಪನಿಯ ಪರವಾಗಿ ಸ್ಥಳದಲ್ಲಿದ್ದ ಚಂದ್ರಶೇಖರ್ ಅವರು, ‘ಶಾಸಕರು ಹೇಳಿದಂತೆ ರಸ್ತೆ ನಿರ್ಮಿಸುವ ಸಂಬಂಧ ಕಂಪನಿ ಜತೆ ಮಾತನಾಡುತ್ತೇನೆ. ಅವರನ್ನು ಹೆದರಿಸಲು ರೌಡಿಗಳನ್ನು ಕರೆಸಿಲ್ಲ. ಸಮೀಪದಲ್ಲೇ ಚಿತ್ರೀಕರಣ ನಡೆಯುತ್ತಿತ್ತು. ಆ ಹುಡುಗರು ನನ್ನ ಹಿಂದೆ ಬಂದಿದ್ದಾರೆ’ ಎಂದು ಶಾಸಕರು ಹಾಗೂ ಪೊಲೀಸರಿಗೆ ಸಮಜಾಯಿಷಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.