ADVERTISEMENT

ಮೊಳಕಾಲ್ಮುರು: ಶತಕ ಬಾರಿಸಿದ ಟೊಮೆಟೊ ದರ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 23:30 IST
Last Updated 17 ಜೂನ್ 2024, 23:30 IST
   

ಮೊಳಕಾಲ್ಮುರು: ಟೊಮೆಟೊ ದರ ಮತ್ತೆ ದಾಖಲೆ ದರಕ್ಕೆ ಏರಿಕೆಯಾಗುತ್ತಿದ್ದು, ಸೋಮವಾರ ತಾಲ್ಲೂಕಿನ ವಾರದ ಸಂತೆಗಳಲ್ಲಿ ₹ 100ಕ್ಕೆ  ಮಾರಾಟವಾಗಿದೆ.

ತಾಲ್ಲೂಕಿನ ರಾಂಪುರ, ಕೊಂಡ್ಲಹಳ್ಳಿಯಲ್ಲಿ ಸೋಮವಾರ ನಡೆದ ಸಂತೆಯಲ್ಲಿ ಉತ್ತಮ ಗಾತ್ರದ ಟೊಮೆಟೊ ಒಂದು ಕೆ.ಜಿಗೆ ₹ 100ಕ್ಕೆ ಮಾರಾಟ ಆಗಿದೆ. ಚಿಕ್ಕ ಗಾತ್ರದ ಹಣ್ಣುಗಳು ಪ್ರತಿ ಕೆ.ಜಿ.ಗೆ
₹ 50ರಿಂದ ₹ 60ಕ್ಕೆ ಮಾರಾಟವಾದವು.

ಮೊಳಕಾಲ್ಮುರು, ಚಳ್ಳಕೆರೆ, ಚಿತ್ರದುರ್ಗ ಮತ್ತು ನೆರೆಯ ಆಂಧ್ರಪ್ರದೇಶದ ರಾಯದುರ್ಗ ಭಾಗದಿಂದ ಇಲ್ಲಿನ ವಾರದ ಸಂತೆಗಳಿಗೆ ಟೊಮೆಟೊ ಪೂರೈಕೆಯಾಗುತ್ತದೆ. ಈಗ ಆಂಧ್ರಪ್ರದೇಶದ ಮದನಪಲ್ಲಿ ಮಾರುಕಟ್ಟೆ ಹಾಗೂ ಕೋಲಾರ ಮಾರುಕಟ್ಟೆಯಿಂದ ಪೂರೈಕೆಯಾಗುತ್ತಿದೆ. ಪ್ರತಿ 30 ಕೆ.ಜಿ ಹಣ್ಣಿನ ಬಾಕ್ಸ್‌ಗೆ
₹ 1,000ರಿಂದ ₹ 1,500ರವರೆಗೂ ಮಾರಾಟವಾಗಿದೆ ಎಂದು ತರಕಾರಿ ವ್ಯಾಪಾರಿ ಮಲ್ಲಿಕಾರ್ಜುನ್‌ ಹೇಳಿದರು.

ADVERTISEMENT

‘ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದಿದ್ದರಿಂದ ದರ ಕಡಿಮೆಯಾಗುವ ಸಾಧ್ಯತೆ ಇಲ್ಲ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಹೇಳಿದರು.

ಕೆಲವೆಡೆ ಟೊಮೆಟೊ ಬೆಳೆಗೆ ರೋಗ ಬಾಧೆ ಆವರಿಸಿದೆ. ಈಗ ನಾಟಿ ಮಾಡಿರುವ ಬೆಳೆ ಇಳುವರಿ ಆರಂಭವಾಗಲು ಇನ್ನೂ ಒಂದು ತಿಂಗಳು ಬೇಕಿದೆ. ಕಳೆದ ವರ್ಷ ಇದೇ ಸಮಯಕ್ಕೆ ದಾಖಲೆ ದರ ಸಿಕ್ಕಿತ್ತು ಎಂದು ಬೆಳೆಗಾರ ಮಂಜುನಾಥ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.