ADVERTISEMENT

ಸಾಮಾನ್ಯ ಜ್ಞಾನದ ಅಸಾಧಾರಣ ಪ್ರತಿಭೆ ಸಾತ್ವಿಕಾ

ಶ್ವೇತಾ ಜಿ.
Published 14 ಫೆಬ್ರುವರಿ 2022, 7:39 IST
Last Updated 14 ಫೆಬ್ರುವರಿ 2022, 7:39 IST
ಸಾತ್ವಿಕಾ ರಾಜೇಶ್
ಸಾತ್ವಿಕಾ ರಾಜೇಶ್   

ಹೊಸದುರ್ಗ: ಆಗಾಧ ಪ್ರಮಾಣದ ನೆನಪಿನ ಶಕ್ತಿಯಿಂದ ಎರಡು ವರ್ಷ ಪ್ರಾಯದಲ್ಲೇಪುಟ್ಟ ಪೋರಿ ಸಾತ್ವಿಕಾ ಸಾಧನೆ ಮಾಡಿದ್ದು, ಕಳೆದ ತಿಂಗಳು ಗಣರಾಜ್ಯೋತ್ಸವ ಸಂದರ್ಭದಲ್ಲಿ ತಾಲೂಕು ಆಡಳಿತವುಈ ಬಾಲಕಿಯ ಪ್ರತಿಭೆ ಗಮನಿಸಿ, ಅಭಿನಂದನಾ ಪತ್ರ ನೀಡಿ ಗೌರವಿಸಿದೆ.

ಹೊಸದುರ್ಗಪಟ್ಟಣದ ಕೋಟೆ ಬಡಾವಣೆ ನಿವಾಸಿ ರಾಜೇಶ್ ಹಾಗೂ ಪದ್ಮಾ ರಾಜೇಶ್‌ ಪುತ್ರಿ ಎರಡು ವರ್ಷದ ಸಾತ್ವಿಕಾ ರಾಜೇಶ್‌. ಕೇವಲ 9 ತಿಂಗಳಿನಲ್ಲೇ ಚಿಕ್ಕ ಚಿಕ್ಕ ಪದಗಳ ಉಚ್ಚಾರಣೆ ಕಲಿತದ್ದು ಸಾತ್ವಿಕಾ ವಿಶೇಷ. ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ತಾಯಿ ಪದ್ಮಾ ರಜೆ ತೆಗೆದುಕೊಂಡು ಹೊಸದುರ್ಗಕ್ಕೆ ಬಂದು ಮಕ್ಕಳಿಗೆ ಆನ್‌ಲೈನ್‌ ತರಗತಿ ಮಾಡುತ್ತಿದ್ದರು. ತಾಯಿ ಇತರೆ ಮಕ್ಕಳಿಗೆ ಹೇಳುತ್ತಿದ್ದ ಪಾಠವನ್ನು ಕಲಿತ ಸಾತ್ವಿಕಾ ಒಂದು ನಿಮಿಷದಲ್ಲಿ ರಾಜ್ಯ, ರಾಜಧಾನಿಗಳು, ರಾಷ್ಟ್ರೀಯ ಹಬ್ಬಗಳು ಹಾಗೂ ಆಚರಣೆಯ ಮಹತ್ವಗಳನ್ನು ಹೇಳುತ್ತಾಳೆ. ಪಿರಿಯಾಡಿಕ್ ಟೇಬಲ್‌‌ನಲ್ಲಿನ 50 ಧಾತುಗಳ ಹೆಸರುಗಳನ್ನು ಹೇಳುವ. ಜೊತೆಗೆ ರಾಷ್ಟ್ರಗೀತೆ, ನಾಡಗೀತೆಯಲ್ಲದೇ ಇತರೆ ದೇಶಭಕ್ತಿಯ ಹಾಡುಗಳನ್ನು ಹಾಡುತ್ತಾಳೆ. ಚಿಕ್ಕ ವಯಸ್ಸಿಗೆ ಮಗುವಿನ ಸಾಧನೆ ಎಲ್ಲರ ಹುಬ್ಬೇರಿಸಿದೆ.

ಪದ್ಮಾ ರಾಜೇಶ್‌

ರಾಷ್ಟ್ರೀಯ ಚಿಹ್ನೆಗಳು, ಸೌರಮಂಡಲದಲ್ಲಿನ ಗ್ರಹಗಳು, ವಿರುದ್ಧ ಪದಗಳು, ಕನ್ನಡ ಜ್ಞಾನಪೀಠ ಪುರಸ್ಕೃತರ ಹೆಸರು, ವಿಜ್ಞಾನಿಗಳು ಹಾಗೂ ಅವರ ಸಂಶೋಧನೆಗಳು, ಸ್ವಾತಂತ್ರ್ಯ ಹೋರಾಟಗಾರರ ಹೆಸರು, ಸಸ್ಯದ ಭಾಗ, ಹಲ್ಲಿನ ವಿಧಗಳ ಪರಿಚಯ, ಪ್ರಪಂಚದ ಅದ್ಭುತಗಳು, ಮಾನದ ದೇಹದ ಭಾಗಗಳು, ವಿವಿಧ ಆಕೃತಿಗಳ ಗುರುತಿಸುವಿಕೆ, ಪದ್ಯ, ಹಾಡು, ದೇವರ ನಾಮ ಮತ್ತು ಶ್ಲೋಕಗಳನ್ನು ತಪ್ಪಿಲ್ಲದಂತೆ ಹೇಳುತ್ತಾಳೆ ಸಾತ್ವಿಕಾ.

ADVERTISEMENT

18 ತಿಂಗಳಿಗೆ ‘ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್’ನಲ್ಲಿ ‘ವಂಡರ್ ಕಿಡ್’, 20ನೇ ತಿಂಗಳಿಗೆ ತಿಂಗಳಲ್ಲಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್‌’ನಲ್ಲಿ ‘ವರ್ಸಟೈಲ್ ಕಿಡ್’, 2 ವರ್ಷಕ್ಕೆ ‘ಕಲಾಮ್ಸ್ ವರ್ಲ್ಡ್ ರೆಕಾರ್ಡ್‌’ನಿಂದ ಜೀನಿಯಸ್ ಕಿಡ್ ಎಂದು ಹೆಸರು ಪಡೆದಿರುವುದು ಈ ಮಗುವಿನ ಹೆಗ್ಗಳಿಕೆ.

ಸಂಗೀತದಲ್ಲಿ ಅವಳಿಗೆ ಹೆಚ್ಚು ಆಸಕ್ತಿ ಇದೆ. ಅವಳ ಆಯ್ಕೆ ಕ್ಷೇತ್ರದಲ್ಲಿ ಅವಳು ಸಾಧನೆ ಮಾಡಲು ಪ್ರೋತ್ಸಾಹಿಸುತ್ತೇವೆ.
- ಪದ್ಮಾ ರಾಜೇಶ್‌, ಸಾತ್ವಿಕಾ ತಾಯಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.