ಹಿರಿಯೂರು: ನಗರದ ತಾಲ್ಲೂಕು ಕಚೇರಿ ಪಕ್ಕದಲ್ಲಿನ ಕರ್ನಾಟಕ ಪ್ರದೇಶ ಕುರುಬರ ಸಂಘದ ಹೆಸರಿನಲ್ಲಿರುವ ನಿವೇಶನದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನಕ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.
‘ಈ ನಿವೇಶನ ಕೇವಲ 4,000 ಅಡಿಗಳಷ್ಟಿದ್ದು, ಅದರಲ್ಲಿ ಕುರುಬರ ಸಂಘದ ಕಚೇರಿ ವ್ಯವಸ್ಥೆ ಮಾಡಿಕೊಳ್ಳಬಹುದು. 2017– 18ರಲ್ಲಿ ತಾವು ಸಿಎಂ ಆಗಿದ್ದಾಗ ಭವನ ನಿರ್ಮಾಣಕ್ಕೆ ಬಿಡುಗಡೆ ಮಾಡಿದ್ದ ₹ 1 ಕೋಟಿ ಜೊತೆಗೆ ಇನ್ನೂ ₹ 1 ಕೋಟಿ ಅನುದಾನವನ್ನು ಬಿಡುಗಡೆ ಮಾಡಬೇಕು’ ಎಂದು ಮುಖಂಡರು ಮನವಿ ಮಾಡಿದರು.
‘ನಗರಕ್ಕೆ ಹೊಂದಿಕೊಂಡಂತೆ ಯಾವುದಾದರೂ ಒಂದು ಕಡೆ ಎರಡು ಎಕರೆ ಜಾಗ ಮಂಜೂರು ಮಾಡಿಸಿ ಕನಕ ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕು. ಕುರುಬ ಜನಾಂಗದ ವಿದ್ಯಾರ್ಥಿಗಳ ಶೈಕ್ಷಣಿಕ ಮುಂದುವರಿಕೆಗೆ ನಗರದಲ್ಲಿ ಹಾಸ್ಟೆಲ್ ಆರಂಭಿಸಲು ನೆರವು ನೀಡಬೇಕು’ ಎಂದು ಕುರುಬ ಜನಾಂಗದ ಮುಖಂಡರು ಮನವಿ ಮಾಡಿದರು.
ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು ಅವರನ್ನು ನಿಗಮ ಮಂಡಳಿಗೆ ನೇಮಿಸಬೇಕು ಎಂದು ಒತ್ತಾಯಿಸಿ ನೂರಾರು ಯುವಕರು ಫ್ಲೆಕ್ಸ್ ಹಿಡಿದು ಮುಖ್ಯಮಂತ್ರಿ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಮಾಜಿ ಸಚಿವ ಎಚ್.ಆಂಜನೇಯ, ಶಾಸಕರಾದ ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ, ವೀರೇಂದ್ರಪಪ್ಪಿ, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಕುರುಬ ಸಮಾಜದ ಮುಖಂಡರಾದ ಕಂದಿಕೆರೆ ಸುರೇಶ್ ಬಾಬು, ಶಶಿಕಲಾ ಸುರೇಶ್ ಬಾಬು, ಬಿ.ಟಿ.ಜಗದೀಶ್, ಎಚ್.ವೆಂಕಟೇಶಮೂರ್ತಿ, ಸುಬ್ರಮಣ್ಯ, ದೇವರಾಜ್, ರಜನಿ ಲೇಪಾಕ್ಷ, ಬಿ.ಮಹಾಂತೇಶ್, ಗಿರಿಜಪ್ಪ, ಗೋಡೆ ತಿಪ್ಪೇಸ್ವಾಮಿ, ಜಯರಾಂ, ಪಿ.ರಾಮಚಂದ್ರಪ್ಪ, ಎಂ. ಮಂಜಣ್ಣ, ಎಚ್.ಆರ್. ಶಂಕರ್, ಕಾಂತರಾಜ್ ಹುಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.