ADVERTISEMENT

ಏಳನೇ ವೇತನ ಆಯೋಗ: ವ್ಯತ್ಯಾಸ ಸರಿಪಡಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 14:04 IST
Last Updated 5 ಸೆಪ್ಟೆಂಬರ್ 2024, 14:04 IST
ಹಿರಿಯೂರಿನಲ್ಲಿ ಗುರುವಾರ ತಾಲ್ಲೂಕು ನಿವೃತ್ತ ನೌಕರರ ಸಂಘದಿಂದ ತಹಶೀಲ್ದಾರ್ ರಾಜೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು
ಹಿರಿಯೂರಿನಲ್ಲಿ ಗುರುವಾರ ತಾಲ್ಲೂಕು ನಿವೃತ್ತ ನೌಕರರ ಸಂಘದಿಂದ ತಹಶೀಲ್ದಾರ್ ರಾಜೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು   

ಹಿರಿಯೂರು: 2022 ಜುಲೈ 1ರಿಂದ 2024 ಜುಲೈ 31ರ ಅವಧಿಯಲ್ಲಿ ಸೇವೆಯಿಂದ ನಿವೃತ್ತರಾಗಿರುವ ನೌಕರರಿಗೆ ಏಳನೇ ವೇತನ ಆಯೋಗದಲ್ಲಿ ಆಗಿರುವ ಆರ್ಥಿಕ ಸೌಲಭ್ಯದಲ್ಲಿನ ವ್ಯತ್ಯಾಸವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಗುರುವಾರ ತಾಲ್ಲೂಕು ನಿವೃತ್ತ ನೌಕರರ ಸಂಘದಿಂದ ತಹಶೀಲ್ದಾರ್ ರಾಜೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಎಲ್ಲಾ ಸರ್ಕಾರಿ ನೌಕರರಿಗೆ, ನಿವೃತ್ತ ನೌಕರರಿಗೆ ಏಳನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತಂದಿದ್ದು, ಆಗಸ್ಟ್ 1ರಿಂದ ಅನ್ವಯವಾಗುವಂತೆ ವೇತನ ಮತ್ತು ಭತ್ಯೆಯನ್ನು ಸರ್ಕಾರ ಹೆಚ್ಚಳ ಮಾಡಿದೆ. ಆದರೆ 2022 ಜುಲೈ 1ರಿಂದ 2024 ಜುಲೈ 31ರ ಅವಧಿಯಲ್ಲಿ ನಿವೃತ್ತರಾಗಿರುವ ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಯ ಸೌಲಭ್ಯದಿಂದ ವಂಚನೆಯಾಗಿದ್ದು, ಈ ತಾರತಮ್ಯವನ್ನು ಸರಿಪಡಿಸಬೇಕು ಎಂದು ಅಧ್ಯಕ್ಷ ಸಿ.ಆರ್. ಏಕಾಂತಪ್ಪ ಒತ್ತಾಯಿಸಿದರು.

ಸಂಘದ ಪರಮಶಿವಯ್ಯ, ಕೆ. ಗುರುಸಿದ್ದಪ್ಪ, ಎಸ್. ನರಸಿಂಹಯ್ಯ, ಜಿ. ಏಕಾಂತಪ್ಪ, ಎನ್. ಯಶೋದಮ್ಮ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.