ADVERTISEMENT

‘ಅನಕ್ಷರಸ್ಥರಿಗೆ ಮತದಾನದ ಮಹತ್ವ ತಿಳಿಸಿ’

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 16:08 IST
Last Updated 22 ನವೆಂಬರ್ 2024, 16:08 IST
ಚಳ್ಳಕೆರೆಯಲ್ಲಿ ಗುರುವಾರ ಆಯೋಜಿಸಿದ್ದ ಮತದಾರರ ಜಾಗೃತಿ ಕಾರ್ಯಕ್ರಮವನ್ನು ಬಿಇಒ ಕೆ.ಎಸ್. ಸುರೇಶ್ ಉದ್ಘಾಟಿಸಿದರು
ಚಳ್ಳಕೆರೆಯಲ್ಲಿ ಗುರುವಾರ ಆಯೋಜಿಸಿದ್ದ ಮತದಾರರ ಜಾಗೃತಿ ಕಾರ್ಯಕ್ರಮವನ್ನು ಬಿಇಒ ಕೆ.ಎಸ್. ಸುರೇಶ್ ಉದ್ಘಾಟಿಸಿದರು   

ಚಳ್ಳಕೆರೆ: ಅನಕ್ಷರಸ್ಥರಲ್ಲಿ ಮತದಾನದ ಜಾಗೃತಿ ಮೂಡಿಸುವುದರ ಜತೆಗೆ ಅದರ ಮಹತ್ವ ತಿಳಿಸಿಕೊಡಬೇಕು ಎಂದು ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್ ಸಲಹೆ ನೀಡಿದರು.

ಮತದಾರರ ಸಾಕ್ಷರತಾ ದಿನಾಚರಣೆ ಪ್ರಯುಕ್ತ ಶಿಕ್ಷಣ ಇಲಾಖೆ ಮತ್ತು ಮತದಾರರ ಸಾಕ್ಷರತಾ ಸಂಘಗಳ ಸಹಯೋಗದಲ್ಲಿ ಗುರುವಾರ ನಗರದ ಬಿಇಒ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಮತದಾರರ ಜಾಗೃತಿ ಮತ್ತು ತಾಲ್ಲೂಕು ಮಟ್ಟದ ವಿವಿಧ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಅಭಿವೃದ್ಧಿಯಲ್ಲಿ ಮತದಾರರ ಪಾತ್ರ ಮಹತ್ವದಾಗಿದೆ. ಉತ್ತಮ ವ್ಯಕ್ತಿಗೆ ಮತಚಲಾಯಿಸುವ ಮೂಲಕ ಯುವ ಜನರು ದೇಶವನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯಬೇಕು ಎಂದು ಸಲಹೆ ನೀಡಿದರು.

ADVERTISEMENT

ಗುಣಾತ್ಮಕ ಶಿಕ್ಷಣ ಪಡೆಯುವುದರ ಜತೆಗೆ ಸಾಮಾಜಿಕ-ವೈಚಾರಿಕೆ ಚಿಂತನೆ ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ವಿದ್ಯಾರ್ಥಿಗಳು ರೂಪುಗೊಳ್ಳಬೇಕು ಎಂದು ಸಮಾಜ ವಿಜ್ಞಾನ ಪರಿವೀಕ್ಷಕ ಪ್ರಶಾಂತ್ ಹೇಳಿದರು.

ಮುಖ್ಯಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಿವಾಸ್, ಸಹ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ. ರಾಜಕುಮಾರ್, ಕಾರ್ಯದರ್ಶಿ ಡಿ. ಈರಣ್ಣ, ಶಿಕ್ಷಣ ಸಂಯೋಜಕ ಮಾರುತಿ ಭಂಡಾರಿ, ಸಹ ಶಿಕ್ಷಕ ಶಿವಮೂರ್ತಿ ಇದ್ದರು.

ಸ್ಪರ್ಧೆಗಳಲ್ಲಿ ವಿಜೇತರಾದವರು:

ಪ್ರಬಂಧ ಸ್ಪರ್ಧೆ ಕನ್ನಡ ಮಾಧ್ಯಮ: ಸ್ನೇಹಾ ಪ್ರಥಮ, ತನುಜ ದ್ವಿತೀಯ, ಮಂಜುಳಾ ತೃತೀಯ, ಇಂಗ್ಲಿಷ್‌ ಮಾಧ್ಯಮ: ಜೀವಿತಾ ಪ್ರಥಮ, ಗಗನ ದ್ವಿತೀಯ, ಕಾವೇರಿ ತೃತೀಯ, ಭಿತ್ತಿಪತ್ರ ರಚನೆ: ರತೀಶ್ ಪ್ರಥಮ, ಶ್ರಾವಣಿ ದ್ವಿತೀಯ, ಕಾರ್ತಿಕ್ ತೃತೀಯ, ರಸಪ್ರಶ್ನೆ: ದೀಕ್ಷಿತಾ, ರುಚಿತಾ ಪ್ರಥಮ, ಸುಚಿತ್, ರಂಗನಾಥ ದ್ವಿತೀಯ, ಧನಂಜಯ, ಅಜಿತ್ ತೃತೀಯ ಬಹುಮಾನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.