ADVERTISEMENT

ಕಾಲುವೆಯ ಹೂಳು ಎತ್ತಿಸಿ- ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2021, 13:13 IST
Last Updated 21 ಡಿಸೆಂಬರ್ 2021, 13:13 IST
ಜಿ.ಎಚ್‌.ತಿಪ್ಪಾರೆಡ್ಡಿ
ಜಿ.ಎಚ್‌.ತಿಪ್ಪಾರೆಡ್ಡಿ   

ಚಿತ್ರದುರ್ಗ: ಭದ್ರ ಜಲಾಶಯದಿಂದ ವಿ.ವಿ.ಸಾಗರಕ್ಕೆ ನೀರು ಹರಿಸುವ ಕಾಲುವೆಯಲ್ಲಿರುವ ಹೂಳನ್ನು ತೆಗೆಸಿ ಜನವರಿ ವರೆಗೆ ನೀರು ಹರಿಸಬೇಕು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಸೂಚಿಸಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಎಂಜಿನಿಯರ್‌ ರಾಘವನ್‌ ಅವರೊಂದಿಗೆ ಮಾತನಾಡಿದ ಶಾಸಕರು, ‘ವಿ.ವಿ.ಸಾಗರ ಭರ್ತಿಯಾಗಲು ಇನ್ನು ಐದು ಅಡಿಗಳು ಬಾಕಿ ಇವೆ. ಭದ್ರಾ ಜಲಾಶಯದ ನೀರು ಹರಿದರೆ ವಿ.ವಿ.ಸಾಗರ ಕೋಡಿ ಬೀಳುತ್ತದೆ. ಈ ಗತವೈಭವವನ್ನು ಕಣ್ತುಂಬಿಕೊಳ್ಳಲು ಜಿಲ್ಲೆಯ ರೈತರು ಕಾಯುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಕಾಲುವೆಯಲ್ಲಿ ಹೂಳು ತುಂಬಿಕೊಂಡಿದೆ. ಭದ್ರಾ ಜಲಾಶಯದ ನೀರು ವಿ.ವಿ.ಸಾಗರಕ್ಕೆ ಹರಿದು ಬರುಲು ಇದು ಅಡ್ಡಿಯಾಗಿದೆ. ಹೂಳು ಎತ್ತಿಸಿದರೆ ಜಿಲ್ಲೆಗೆ ನೀರು ಹರಿದು ಬರಲಿದೆ. ಇದರಿಂದ ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ’ ಎಂದಿದ್ದಾರೆ.

ADVERTISEMENT

‘ವಿ.ವಿ.ಸಾಗರ ಹಲವು ದಶಕಗಳ ಹಿಂದೆ ಕೋಡಿ ಬಿದ್ದಿತ್ತು. ಜನವರಿ ತಿಂಗಳವರೆಗೆ ಭದ್ರಾ ನೀರು ಹರಿಸಲು ಸರ್ಕಾರ ಅನುಮತಿ ನೀಡಿದೆ. ನಿಗದಿತ ಪ್ರಮಾಣದ ನೀರು ಹರಿದುಬಂದರೆ ವಿ.ವಿ.ಸಾಗರದ ಇತಿಹಾಸ ಮರುಕಳುಹಿಸಲಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.