ADVERTISEMENT

ತೊಗರಿಬೆಳೆಗೆ ಆವರಿಸಿದ ಮಳೆನೀರು: ರೈತರ ಆತಂಕ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 16:22 IST
Last Updated 15 ಅಕ್ಟೋಬರ್ 2024, 16:22 IST
ಚಳ್ಳಕೆರೆ ತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಡಿಹಳ್ಳಿ ಗ್ರಾಮದ ತೊಗರಿಬೆಳೆಯಲ್ಲಿ ಆವರಿಸಿರುವ ಮಳೆ ನೀರು
ಚಳ್ಳಕೆರೆ ತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಡಿಹಳ್ಳಿ ಗ್ರಾಮದ ತೊಗರಿಬೆಳೆಯಲ್ಲಿ ಆವರಿಸಿರುವ ಮಳೆ ನೀರು   

ಚಳ್ಳಕೆರೆ: 4–5 ದಿನಗಳಿಂದ ತಾಲ್ಲೂಕು ವ್ಯಾಪ್ತಿಯಲ್ಲಿ ಸುರಿಯುತ್ತಿರುವ ನಿರಂತರ ಮಳೆ ಸುರಿಯುತ್ತಿದ್ದು, ವಿವಿಧೆಡೆ ಬೆಳೆ ನಷ್ಟ ಉಂಟಾಗಿದೆ.

ತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಡಿಹಳ್ಳಿ ಗ್ರಾಮದ ತೊಗರಿ ಬೆಳೆಗೆ ನೀರು ಆವರಿಸಿದ್ದು, ರೈತರಲ್ಲಿ ಆತಂಕ ಹೆಚ್ಚಾಗಿದೆ. 

ಶೇಂಗಾ ಬಿತ್ತನೆಗೆ ಮುಂಗಾರು ಹಂಗಾಮಿನಲ್ಲಿ ಸಕಾಲಕ್ಕೆ ಮಳೆ ಬೀಳಲಿಲ್ಲ. ಜುಲೈ ತಿಂಗಳಲ್ಲಿ ಉತ್ತಮ ಮಳೆ ಬಿದ್ದಿದ್ದರಿಂದ ಶೇಂಗಾ ಬದಲು ತೊಗರಿ ಬಿತ್ತನೆ ಮಾಡಲಾಗಿತ್ತು. ಬೀಜ ಹುಟ್ಟುವಳಿ ಆಗಿದ್ದಲ್ಲದೆ ಉತ್ತಮವಾಗಿ ಬೆಳೆದ ಗಿಡಗಳು ಪೂರ್ಣ ಪ್ರಮಾಣದಲ್ಲಿ ಹೂವು ಬಿಟ್ಟಿದ್ದವು. ಉತ್ತಮ ಇಳುವರಿಯೂ ಇತ್ತು. ಹೀಗಾಗಿ ಬೆಳೆಯಿಂದ ಕನಿಷ್ಠ ₹ 2 ಲಕ್ಷ ಆದಾಯ ನಿರೀಕ್ಷಿಸಲಾಗಿತ್ತು’ ಎಂದು ಗ್ರಾಮದ ರೈತ ಹನುಮಂತಪ್ಪ ಅಳಲು ತೋಡಿಕೊಂಡರು.

ADVERTISEMENT

‘ನಿರಂತರ ಮಳೆಯ ಪರಿಣಾಮ ಜಮೀನಿನಲ್ಲಿ ನೀರು ತುಂಬಿಕೊಂಡಿದ್ದು, ತಂಪು ಹೆಚ್ಚಾಗಿದೆ. ಇದರಿಂದ ಗಿಡದಲ್ಲಿನ ಹೂವು ಸಂಪೂರ್ಣ ಉದುರಿ ಬೆಳೆ ನಷ್ಟ ಅನುಭವಿಸುವಂತಾಗಿದೆ. ಬೇಸಾಯ, ಗೊಬ್ಬರ, ಬಿತ್ತನೆ ಬೀಜ, ಕಳೆ ಕೀಳಿಸುವ ಕೂಲಿ ಸೇರಿ 5 ಎಕರೆ ತೊಗರಿ ಬಿತ್ತನೆಗೆ ವೆಚ್ಚ ಮಾಡಿದ ₹ 50,000 ಬಂಡವಾಳದಲ್ಲಿ ಬಿಡಿಗಾಸು ದೊರೆಯುತ್ತಿಲ್ಲ’ ಎಂದು ರೈತರು ಸಂಕಷ್ಟ ಹೇಳಿಕೊಂಡರು.

ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರದಿಂದ ಪರಿಹಾರ ದೊರಕಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.