ADVERTISEMENT

‘ಮಹಿಳಾ ಸಬಲೀಕರಣದಿಂದ ಅಭಿವೃದ್ಧಿ ಸಾಧ್ಯ’

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 16:07 IST
Last Updated 22 ನವೆಂಬರ್ 2024, 16:07 IST
ಮೊಳಕಾಲ್ಮುರಿನಲ್ಲಿ ಗುರುವಾರ ಸಿರಿಧಾನ್ಯಗಳ ಮೌಲ್ಯವರ್ಧನಾ ಕಾರ್ಯಾಗಾರ ನಡೆಯಿತು
ಮೊಳಕಾಲ್ಮುರಿನಲ್ಲಿ ಗುರುವಾರ ಸಿರಿಧಾನ್ಯಗಳ ಮೌಲ್ಯವರ್ಧನಾ ಕಾರ್ಯಾಗಾರ ನಡೆಯಿತು   

ಮೊಳಕಾಲ್ಮುರು: ಮಹಿಳೆಯರು ಸಾಕ್ಷರರಾಗುವ ಜತೆಗೆ ಆರ್ಥಿಕವಾಗಿ ಸಬಲರಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಧಾರವಾಡದ ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆಯ ಮುಖ್ಯಸ್ಥೆ ಕೆ.ಜೆ. ಸಣ್ಣಪಾಪಮ್ಮ ಹೇಳಿದರು.

ಪಟ್ಟಣದಲ್ಲಿ ಗುರುವಾರ ಕೃಷಿ ವಿಶ್ವವಿದ್ಯಾಲಯ ಧಾರವಾಡ, ಅಖಿಲ ಭಾರತ ಸಮನ್ವಯ ಸಂಶೋಧನಾ ಯೋಜನೆ ಹಾಗೂ ಸಂಜೀವಿನಿ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಆಶ್ರಯದಲ್ಲಿ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಶೇಂಗಾ ಹಾಗೂ ಸಿರಿಧಾನ್ಯಗಳ ಮೌಲ್ಯವರ್ಧನಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮೊಳಕಾಲ್ಮುರು ಹಾಗೂ ಚಳ್ಳಕೆರೆ ತಾಲ್ಲೂಕಿನಲ್ಲಿ ಶೇಂಗಾ ಮತ್ತು ಸಿರಿಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಇಲ್ಲಿ ಇವುಗಳನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಲು ವಿಫುಲ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಸಂಘ, ಸಂಸ್ಥೆಗಳ ಮೂಲಕ ತರಬೇತಿ ನೀಡಲು ಕೃಷಿ ಇಲಾಖೆ ಮುಂದಾಗಿದೆ. ಇದರ ಸದುಪಯೋಗ ಮಾಡಿಕೊಂಡು ಮಹಿಳೆಯರು ಅಭಿವೃದ್ಧಿ ಹೊಂದಬೇಕು ಎಂದು ಸಲಹೆ ನೀಡಿದರು.

ADVERTISEMENT

ಶೇಂಗಾವನ್ನು ಮೌಲ್ಯವರ್ಧನೆ ಮಾಡಿ ಶೇಂಗಾ ಚಿಕ್ಕಿ, ಶೇಂಗಾ ಚಟ್ನಿಪುಟಿ, ಶೇಂಗಾ ಹೋಳಿಗೆ ಸೇರಿದಂತೆ ಹಲವು ಉತ್ಪನ್ನಗಳನ್ನು ಮಾಡಬಹುದು. ಸಿರಿಧಾನ್ಯಗಳಿಂದ ಹಪ್ಪಳ, ಸಂಡಿಗೆ, ಚಿಕ್ಕಿ, ಬರ್ಫಿ, ದೋಸೆ ಹಿಟ್ಟು, ನಿಪ್ಪಟ್ಟು ಮಾಡಬಹುದಾಗಿದೆ. ತರಬೇತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೃಷಿ ಅಧಿಕಾರಿ ಹೇಮಂತ್‌ ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿ ನಿರಂಜನ್‌, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ. ಜಗಳೂರಯ್ಯ, ಅರಬಿಂದು ಫುಡ್‌ ಪ್ರಾಡಕ್ಟ್‌ ಸಂಸ್ಥೆಯ ವ್ಯವಸ್ಥಾಪಕಿ ಕೆ.ಜೆ. ಜಯಲಕ್ಷ್ಮೀ, ಕೃಷಿ ಸಂಶೋಧನಾ ಕೇಂದ್ರದ ಭಾರತಿ ಮಹಾಲೆ, ಲತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.