ಮಂಗಳೂರು: ‘ಪ್ರಚಾರದಲ್ಲಿ ಇರುವುದಕ್ಕಾಗಿಯೇ ಸದಾ ವಿವಾದಾತ್ಮಕ ಹೇಳಿಕೆ ನೀಡುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಪಂಚಾಯತ್ ಸದಸ್ಯರಾಗುವುದಕ್ಕೂ ಯೋಗ್ಯರಲ್ಲ’ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ವಾಗ್ದಾಳಿ ನಡೆಸಿದರು.
‘ಹಿಂದೂ ಯುವತಿಯರನ್ನು ಸ್ಪರ್ಶಿಸುವ ಇತರೆ ಧರ್ಮದವರ ಕೈ ಕತ್ತರಿಸಿ’ ಎಂಬ ಅನಂತಕುಮಾರ್ ಹೆಗಡೆ ಹೇಳಿಕೆಗೆ ನಗರದಲ್ಲಿ ಸೋಮವಾರ ಪ್ರತಿಕ್ರಿಯಿಸಿದ ಗೃಹ ಸಚಿವರು, ‘ಕೋಮು ಘರ್ಷಣೆ ಸೃಷ್ಟಿಸುವುದಕ್ಕಾಗಿಯೇ ಅವರು ಇಂತಹ ಹೇಳಿಕೆ ಕೊಟ್ಟಿದ್ದಾರೆ. ಅವರ ಬಗ್ಗೆ ಮಾತನಾಡುವುದೇ ತಪ್ಪು ಅನಿಸುತ್ತದೆ’ ಎಂದರು.
ಅವರಿಗೆ ಸಂಸತ್ತು ಮತ್ತು ಸಂವಿಧಾನದ ಮೇಲೆ ಗೌರವ ಇಲ್ಲ. ಸಂವಿಧಾನವನ್ನೇ ಬದಲಾಯಿಸಲು ಹೊರಟ ಸಂಸದ ಅವರು. ಇಂತಹ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ. ಇಂತಹವರಿಗೆ ಲೋಕಸಭಾ ಚುನಾವಣೆಯಲ್ಲಿ ಜನರು ಸರಿಯಾದ ಉತ್ತರ ನೀಡುತ್ತಾರೆ’ ಎಂದು ಹೇಳಿದರು.
ಅನಂತಕುಮಾರ್ ಹೆಗ್ಡೆ ಸಂಸತ್ತಿನಲ್ಲಿ ಇರಲು ಯೋಗ್ಯರಲ್ಲ. ಇಂತಹವರು ಪಂಚಾಯಿತಿ ಸದಸ್ಯರಾಗುವುದಕ್ಕೂ ಯೋಗ್ಯರಲ್ಲ ಎಂದು ವಾಗ್ದಾಳಿ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.