ಮಂಗಳೂರು: ಹೊರಗೆ ಬಿಸಿಲಿನ ಝಳ, ಅದಕ್ಕಿಂತಲೂ ಮಿಗಿಲಾಗಿ ಚುನಾವಣಾ ಕಾವು. ಒಳಗೆ ನಾದ, ನೃತ್ಯದ ಲಾಸ್ಯ. ಪುಟ್ಟ ಮಕ್ಕಳು ಹೆಜ್ಜೆ ಹಾಕಿದಂತೆ ಜಂಜಡವೆಲ್ಲ ಮರೆತ ಭಾವ... ನಗರದ ಪುರಭವನದಲ್ಲಿ ಶುಕ್ರವಾರ ಮಧ್ಯಾಹ್ನ ಕಂಡ ಸನ್ನಿವೇಶ ಇದು. ಉರ್ವ ನಾಟ್ಯಾಂಜಲಿ ವತಿಯಿಂದ ನಡೆದ ‘ಸಂಗೀತ ನೃತ್ಯ ಕಲೋತ್ಸವ’ ನೂರಾರು ಪುಟಾಣಿಗಳು, ಪ್ರತಿಭೆಗಳ ಭಾವಾಭಿನಯಕ್ಕೆ ಸಾಕ್ಷಿಯಾಯಿತು.
ಪುಟ್ಟ ಪುಟ್ಟ ಕಾಲಿಗೆ ಪುಟ್ಟ ಪುಟ್ಟ ಗೆಜ್ಜೆ ಕಟ್ಟಿ ಅತ್ತಿತ್ತ ಹೆಜ್ಜೆ ಇಡುತ್ತಿದ್ದ ಪುಟಾ ಣಿಗಳು, ಜ್ಞಾನ, ರಾಗ, ತಾಳದ ಸಂಗಮ ವಾಗಿ ಮತ್ತು ನವರಸಗಳ ಮಿಶ್ರಣವಾಗಿ ಮೂಡಿದ ನಾಟ್ಯಗಳು ಒಂದಕ್ಕೊಂದು ಮಿಗಿಲು ಎಂಬಂತೆ ಇದ್ದವು. ಅಧಿಕ ಸಂಖ್ಯೆಯಲ್ಲಿ ಪೋಷಕರು ಪ್ರೇಕ್ಷಕರಾಗಿ ಇದ್ದುದರಿಂದ ಸಭಾಂಗಣ ತುಂಬೆಲ್ಲ ಕೌತುಕ, ಕುತೂಹಲ, ಹರ್ಷ, ಧನ್ಯತಾ ಭಾವ ಮನೆ ಮಾಡಿತ್ತು.
ನಾಟ್ಯಾಚಾರ್ಯ ಉಳ್ಳಾಲ ಮೋಹನ ಕುಮಾರ್ ಅವರು ಉದ್ಘಾಟಿ ಸಿದರು. ನಾಟ್ಯಾಲಯದ ಗುರುಗಳಾದ ಕಮಲಾ ಭಟ್, ರಾಜಶ್ರೀ ಉಳ್ಳಾಲ, ಸಂಗೀತ ಗುರು ವಿದ್ವಾನ್ ಎಂ.ವಿ. ಗಣೇಶರಾಜ್ ಮತ್ತಿತರರು ಇದ್ದರು. ಸಂಜೆ ನಡೆದ ಸಭಾ ಕಾರ್ಯ ಕ್ರಮದಲ್ಲಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ಪ್ರತಿಭೆಯ ದ್ಯೋತಕವಾಗಿ ನಾಟ್ಯಾಂಜಲಿ ಸಂಸ್ಥೆ ಹಲವರನ್ನು ಸಮಾಜಕ್ಕೆ ಪರಿಚಯಿಸಿದೆ ಎಂದರು.
ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಜಯರಾಂ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಲೆ, ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಪತ್ರಕರ್ತ ಮನೋಹರ ಪ್ರಸಾದ್ ಮಾತನಾಡಿದರು. ಹುಬ್ಬಳ್ಳಿ ನಾಟ್ಯಾಂ ಜಲಿ ನೃತ್ಯಕಲಾ ಕೇಂದ್ರದ ಸಹನಾ ಪ್ರದೀಪ್ ಭಟ್ ಹಾಗೂ ಕಟಪಾಡಿಯ ನೃತ್ಯಸುಧಾ ನೃತ್ಯಸಂಸ್ಥೆಯ ಸೌಮ್ಯ ಎಸ್. ರಾವ್ ಅವರಿಗೆ ಸಾಧಕ ಪ್ರಶಸ್ತಿ ನೀಡ ಲಾಯಿತು. ಚೈತ್ರಾ ಭಟ್ ಅವರನ್ನು ಗೌರವಿಸಲಾಯಿತು.
ಶಿವಸ್ತುತಿ, ಜತಿಸ್ವರ, ದೇವಿಸ್ತುತಿ, ಗಣೇಶ ವಂದನಂ, ಪೂಜಾ ನೃತ್ಯ, ಗಣೇಶ ಸ್ತುತಿ, ಕೃಷ್ಣಸ್ತುತಿ ಮುಂತಾದ ಬಗೆ ಬಗೆಯ ನೃತ್ಯಗಳಿಗೆ ಉರ್ವ ನಾಟ್ಯಾಂಜಲಿ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. 380ಕ್ಕಿಂತಲೂ ಹೆಚ್ಚು ಕಲಾವಿ ದೆಯರು ನೃತ್ಯ ಪ್ರದರ್ಶಿಸಿದರು. ಅಚಲಾ ಐತಾಳ್ ಸುಗಮ ಸಂಗೀತ ಉಣ ಬಡಿಸಿದರು. ಸಾಯಿನಾಥ್ ಮಲ್ಲಿಗೆ ಮಾಡು ಸ್ವಾಗತಿಸಿದರು. ಸತ್ಯನಾರಾ ಯಣ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.