ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಚೆನ್ನೈನ ಮೆಡ್ರಾಸ್ ಕ್ರೊಕಡೈಲ್ ಟ್ರಸ್ಟ್ ಮತ್ತು ಚೆನ್ನೈ ಉರಗೋದ್ಯಾನದಿಂದ ಅಪರೂಪದ ವಿದೇಶಿ ತಳಿಯ 16 ಮೊಸಳೆಗಳನ್ನು ತರಲಾಗಿದೆ.
ಇವುಗಳಲ್ಲಿ ಆಫ್ರಿಕಾದ ನೈಲ್, ಸಯಮೀಸ್, ಆಫ್ರಿಕನ್ ಡ್ವಾರ್ಫ್ ಮೊಸಳೆ, ಸ್ಪೆಟ್ಟಿಕಲ್ ಕೈಮಾನ್ ಮೊಸಳೆಗಳಲ್ಲದೆ, ವಿನಾಶದಂಚಿನಲ್ಲಿರುವ ಗಾರಿಯಲ್‌ಗಳು ಸೇರಿವೆ.
ಇವುಗಳ ಜತೆ ಅಪರೂಪದ ನಾಲ್ಕು ರೆಟಿಕ್ಯುಲೇಟೆಡ್ ಹೆಬ್ಬಾವುಗಳನ್ನೂ ತರಲಾಗಿದೆ. ಪಿಲಿಕುಳದಲ್ಲಿ ಈಗಾಗಲೇ ನಾಲ್ಕು ಮಾರ್ಶ್ ಮತ್ತು ಗಾರಿಯಲ್ ಮೊಸಳೆಗಳಿವೆ.
ಪ್ರಾಣಿ ಸಂಗ್ರಾಲಯಗಳ ನಡುವೆ ನಡೆಯುವ ಪ್ರಾಣಿಗಳ ವಿನಿಮಯ ಯೋಜನೆಯಲ್ಲಿ ಈ ಮೊಸಳೆಗಳು ಮತ್ತು ಹೆಬ್ಬಾವುಗಳನ್ನು ಪಿಲಿಕುಳಕ್ಕೆ ತರಲಾಗಿದೆ. ಇವುಗಳ ಬದಲಿಗೆ ಪಿಲಿಕುಳದಿಂದ 7 ವಿಟೆಕರ್ ಬೊವಾ, 4 ಹೆಬ್ಬಾವು ಮತ್ತು 2 ಹೆಣ್ಣು ಸರ್ಪಗಳನ್ನು ಚೆನ್ನೈಗೆ ಕಳುಹಿಸಿಕೊಡಲಾಗಿದೆ.
ಪಿಲಿಕುಳಕ್ಕೆ ಬಂದಿರುವ `ಹೊಸ ಅತಿಥಿ'ಗಳನ್ನು ವೀಕ್ಷಣೆಗೆ ಇಡಲಾಗಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಹೆಚ್.ಜೆ. ಭಂಡಾರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.