ಮಂಗಳೂರು:ಮಾಜಿ ಪ್ರಧಾನಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಕವನಗಳ ಗಾಯನ, ಅರ್ಥವಿವರಣೆಯ ವಿಭಿನ್ನ ಕಾರ್ಯಕ್ರಮ ‘ಕಾವ್ಯಾಂಜಲಿ’ ಗುರುವಾರ ನಗರದ ಕೆನರಾ ಶಾಲೆಯ ಭುವನೇಂದ್ರ ಸಭಾಂಗಣದಲ್ಲಿ ನಡೆಯಿತು.
ಆಕಾಶವಾಣಿ ಕಲಾವಿದ ತೋನ್ಸೆ ಪುಷ್ಕಳ ಕುಮಾರ್, ನಿರೂಪಕ ಆದರ್ಶ ಗೋಖಲೆ ಮತ್ತು ತಂಡದವರು ಕವನಗಳನ್ನು ಪ್ರಸ್ತುತಪಡಿಸಿದರು. ದೇಶ, ಜೀವನ, ಮೌಲ್ಯಗಳು ಮತ್ತು ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಕವನಗಳನ್ನು ವಾಚಿಸಲಾಯಿತು.
ಬಿಜೆಪಿ ವಿಭಾಗ ಸಹಪ್ರಭಾರಿ ಪ್ರತಾಪ ಸಿಂಹ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.‘ಭಾರತೀಯ ಜನತಾ ಪಾರ್ಟಿ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದ್ದರೆ ಅದರ ಹಿಂದೆ ವಾಜಪೇಯಿವರ ಅವಿರತ ಶ್ರಮವಿದೆ. ಪಕ್ಷಕ್ಕೆ ಅವರೊಂದು ಶಕ್ತಿಯಾಗಿದ್ದರು.ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಉದ್ದಗಲಕ್ಕೂ ಓಡಾಡಿಕೊಂಡು ಜನರ ಸಮಸ್ಯೆಗಳಿಗೆ ಸ್ವಂದಿಸುತ್ತಾ ರಾಷ್ಟ್ರ ಸಮರ್ಪಿತ ಶಕ್ತಿಯಾಗಿ ಅನಾವರಣಗೊಂಡವರು. ಅವರು ಮಾಡಿದ ಕೆಲಸ ಕಾರ್ಯಗಳಿಂದ ಅವರನ್ನು ನಮ್ಮವರು ಎನ್ನುವ ಭಾವವನ್ನು ಜಾಗೃತಗೊಳಿಸಿದರು. ಸಾವಿರಾರು ಜನರ ಮಧ್ಯೆ ನಿಂತು ಕೆಲಸ ಮಾಡುವ ಮೂಲಕ ತಮ್ಮ ಅನುಭವದಿಂದ ದೇಶದ ಜನರಿಗೆ ಮಾದರಿ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ’ ಎಂದು ಅವರು ಹೇಳಿದರು.
ವಾಜಪೇಯಿ ಅವರು ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಉದ್ದಗಲಕ್ಕೂ ಓಡಾಡಿಕೊಂಡು ಜನರ ಸಮಸ್ಯೆಗಳಿಗೆ ಸ್ವಂದಿಸುತ್ತಾ ರಾಷ್ಟ್ರ ಸಮರ್ಪಿತ ಶಕ್ತಿಯಾಗಿ ಅನಾವರಣಗೊಂಡವರು. ಅವರು ಮಾಡಿದ ಕೆಲಸ ಕಾರ್ಯಗಳಿಂದ ಅವರನ್ನು ನಮ್ಮವರು ಎನ್ನುವ ಭಾವವನ್ನು ಜಾಗೃತಗೊಳಿಸಿದರು. ಸಾವಿರಾರು ಜನರ ಮಧ್ಯೆ ನಿಂತು ಕೆಲಸ ಮಾಡುವ ಮೂಲಕ ತಮ್ಮ ಅನುಭವದಿಂದ ದೇಶದ ಜನರಿಗೆ ಮಾದರಿ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ ಎಂದರು.
ಶಾಸಕರಾದ ಡಿ. ವೇದವ್ಯಾಸ ಕಾಮತ್, ಬಿಜೆಪಿಯ ಪ್ರಮುಖರಾದ ಎನ್. ಯೋಗೀಶ್ ಭಟ್, ಕ್ಯಾಪ್ಟನ್ ಬ್ರಿಜೇಶ್ ಚೌಟ, ನಿತಿನ್ ಕುಮಾರ್, ರವಿಶಂಕರ ಮಿಜಾರ್, ಪೂಜಾ ಪೈ, ಕಾತ್ಯಾಯಿನಿ, ರವೀಂದ್ರ ಕುಮಾರ್ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು. ರಮೇಶ್ ಕಂಡೆಟ್ಟು ಸ್ವಾಗತಿಸಿದರು.
ನಿವೇದಿತಾ ಶೆಟ್ಟಿ ನಿರೂಪಿಸಿದರು. ಈ ಬಳಿಕ ಕಾವ್ಯಗಳ ವಾಚನವನ್ನು ಖ್ಯಾತ ಆಕಾಶವಾಣಿ ಕಲಾವಿದ ಪುಷ್ಕಳ ಕುಮಾರ್, ನಿರೂಪಕ ಆದರ್ಶ ಗೋಖಲೆ ಮತ್ತು ತಂಡದ ವತಿಯಿಂದ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.