ADVERTISEMENT

ಕೆಐಒಸಿಎಲ್ ಪೆಲೆಟ್ ಮಾರಾಟದ ಮೇಲೆ ಶೇ 40 ತೆರಿಗೆ; ಹಿಂಪಡೆಯಲು ಖಾದರ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 7:27 IST
Last Updated 6 ಜೂನ್ 2022, 7:27 IST
ಯು.ಟಿ. ಖಾದರ್
ಯು.ಟಿ. ಖಾದರ್   

ಮಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೆಐಒಸಿಎಲ್ ನ ಪೆಲೆಟ್ ಮಾರಾಟದ ಮೇಲೆ ಶೇ 40ರಷ್ಟು ತೆರಿಗೆ ವಿಧಿಸುವ ಮೂಲಕ ಅದನ್ನು ಮುಚ್ಚಿಸುವ ಹುನ್ನಾರ ನಡೆಯುತ್ತಿದೆ. ಈ ಆದೇಶ ರದ್ದು ಪಡಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು.ಟಿ. ಖಾದರ್ ಆಗ್ರಹಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಲಾಭದಲ್ಲಿರುವ ಕೆಐಒಸಿಎಲ್ ನ ಪೆಲೆಟ್ ಗೆ ಏಕಾಏಕಿಯಾಗಿ ಮಾರಾಟ ತೆರಿಗೆ ವಿಧಿಸುವ ಮೂಲಕ ಸರ್ಕಾರ ಇದನ್ನು ಬಂದ್ ಮಾಡಲು ಅಥವಾ ಖಾಸಗೀಕರಣಗೊಳಿಸಲು ಹೊರಟಂತಿದೆ' ಎಂದರು.

ಈ ಬಗ್ಗೆ ಸಂಸದ ನಳಿನ್ ಕುಮಾರ್ ಜತೆ ಈಗಾಗಲೇ ಮಾತನಾಡಲಾಗಿದ್ದು, ಆದೇಶವನ್ನು ಹಿಂಪಡೆಯಲು ಒತ್ತಾಯಿಸಲಾಗಿದೆ ಎಂದರು.

ಎನ್ ಎಂಪಿಟಿ, ಬಿಎಸ್ ಎನ್ ಎಲ್, ಏರ್‌ಪೋರ್ಟ್, ಬ್ಯಾಂಕ್ ಗಳನ್ನು ಖಾಸಗೀಕರಣಗೊಳಿಸಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರ ಸ್ವಾಮ್ಯದ ಸಂಸ್ಥೆ ಗಳು ಗರಿಷ್ಠ ಪ್ರಮಾಣದಲ್ಲಿ ಖಾಸಗೀಕರಣಗೊಂಡಿವೆ. ಆಡಿದ ಮಾತಿಗೆ ಸರ್ಕಾರ ತಪ್ಪಿದೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಶಕುಂತಳಾ ಶೆಟ್ಟಿ, ಜೆ.ಆರ್. ಲೋಬೊ,, ಶಾಹುಲದ ಹಮೀದ್, ಮಮತಾ ಗಟ್ಟಿ, ಸದಾಶಿವ ಉಳ್ಳಾಲ್, ಶುಭೋದಯ ಆಳ್ವ , ನಾರಾಯಣ ನಾಯ್ಕ, ಸುಭಾಷ್ ಕೊಳ್ನಾಡು, ಜೋಕಿಂ, ಸಂತೋಷ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.