ADVERTISEMENT

ಜಾತಿ ಸಂಘಟನೆ ಆಧಾರ ಸ್ತಂಭ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2018, 6:30 IST
Last Updated 5 ಫೆಬ್ರುವರಿ 2018, 6:30 IST

ಬೆಳ್ತಂಗಡಿ: ‘ಜಾತಿ ಸಂಘಟನೆಗಳು  ಸಮಗ್ರ ಹಿಂದೂ ಸಮಾಜಕ್ಕೆ ಆಧಾರ ಸ್ತಂಭವಾಗಿ ಇರಬೇಕು’ ಎಂದು ಮಾಣಿಲ  ಮೋಹನದಾಸ ಸ್ವಾಮೀಜಿ ಹೇಳಿದರು. ಬೆಳ್ತಂಗಡಿಯಲ್ಲಿ   ಭಾನುವಾರ ನಡೆದ ಕುಲಾಲ -ಕುಂಬಾರರ ಪ್ರಥಮ ತಾಲ್ಲೂಕು ಸಮಾವೇಶ ಮತ್ತು ಹಕ್ಕೊತ್ತಾಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ ‘ಕುಂಬಾರರು ಹಿಂದೂ ಸಮಾಜದ ಅಂಗ.  ನಮ್ಮ ಹಕ್ಕುಗಳು  ಸಿಗುವವರೆಗೆ ನಮ್ಮ ಹೋರಾಟ ನಿಲ್ಲಬಾರದು. ರಾಜಕೀಯ ಅಸ್ತಿತ್ವ ಇಲ್ಲದಿದ್ದರೆ ಯಾವುದೇ ಅನುದಾನವೂ ಸಿಗುವುದಿಲ್ಲ. ಹೋರಾಟ ಚಳವಳಿ ರೂಪದಲ್ಲಿ ಮುಂದುವರಿಯಲಿ’ ಎಂದರು.

ಸಚಿವ ರಮಾನಾಥ ರೈ ಮಾತನಾಡಿ, ‘ಸಾಮಾಜಿಕ ನ್ಯಾಯಕ್ಕಾಗಿ ಬೇಡಿಕೆಗಳನ್ನು ಇಡುವುದು ಸಹಜ. ಹಿಂದುಳಿದ ಎಲ್ಲಾ ಜಾತಿ ಸಂಘಟನೆಗಳಿಗೆ ರಾಜ್ಯ ಸರ್ಕಾರ ಸೂಕ್ತ ಅನುದಾನ ಕೊಟ್ಟಿದೆ’ ಎಂದರು. ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ , ‘ಕುಲಾಲ ಭವನಕ್ಕೆ  ಸಂಸದರ ನಿಧಿಯಿಂದ ಅನುದಾನ ಒದಗಿಸುವ ಬಗ್ಗೆ ಭರವಸೆ’ ನೀಡಿದರು.

ADVERTISEMENT

ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜ ಮಾತನಾಡಿ ಸಮರ್ಥ ನಾಯಕತ್ವ ಗುಣ ಹೊಂದಿರುವ ಕುಂಬಾರ ಸಮಾಜ ಹಿಂದೂ ಸಮಾಜಕ್ಕೆ ಅಪಾರ ಕೊಡುಗೆಯನ್ನು ನೀಡಿದೆ. ಕುಲಾಲ ಭವನಕ್ಕೆ ನಳಿನ್ ಕುಮಾರ್ ಕಟೀಲ್‌ ಅವರ ಸಂಸದ ನಿಧಿಯಿಂದ ₹ 10 ಲಕ್ಷ ನೀಡುವಂತೆ ಪ್ರಯತ್ನಿಸುತ್ತೇನೆ ಎಂದರು.

ರಾಜ್ಯ ಕುಂಬಾರರ ಮಹಾಸಂಘದ ಅಧ್ಯಕ್ಷ ಶಿವಕುಮಾರ್ ಚೌಡಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು. ಸಭಾಧ್ಯಕ್ಷತೆಯನ್ನು ಕುಲಾಲ ಕುಂಬಾರ ಯುವ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಹರೀಶ್ ಕಾರಿಂಜ ವಹಿಸಿ, ಧ್ವಜಾರೋಹಣ ನೆರವೇರಿಸಿದರು. ರಾಜ್ಯ ಕುಂಬಾರರ ಮಹಾಸಂಘ ಕಾರ್ಯಾಧ್ಯಕ್ಷ ಅಣ್ಣಯ್ಯ ಕುಲಾಲ್ ಉಳ್ತೂರು ಹಕ್ಕೊತ್ತಾಯ ಮಂಡಿಸಿದರು.

ಶಾಸಕ ಕೆ. ವಸಂತ ಬಂಗೇರ, ಕುಂಬಾರ ನೌಕರರ ಕ್ಷೇಮಾಭಿವೃದ್ಧಿ ಸಂಘ ರಾಜ್ಯ  ಸಮಿತಿ ಅಧ್ಯಕ್ಷ ಆರ್.ಶ್ರೀನಿವಾಸ,  ತಾಲ್ಲೂಕು ಘಟಕದ ಅಧ್ಯಕ್ಷ ಅಧ್ಯಕ್ಷ ಪದ್ಮಮೂಲ್ಯ ಅನಿಲಡೆ, ಯುವ ವೇದಿಕೆ ಅಧ್ಯಕ್ಷ ತೇಜಸ್ವೀರಾಜ್, ಜಿಲ್ಲಾ ಅಧ್ಯಕ್ಷ ಜಯಶ್ ಗೋವಿಂದ್, ಉಡುಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಲಾಲ್ ನಡೂರು, ತಾಲೂಕು ಅಧ್ಯಕ್ಷ ಲೋಕೇಶ್ ಕುಲಾಲ್, ಮಾತೃಸಂಘದ ಜಿಲ್ಲಾ ಅಧ್ಯಕ್ಷ ಸುಜಿರ್ ಕುಡುಪು,  ನಡುಬೊಟ್ಟು ಧರ್ಮದರ್ಶಿ ರವಿ ಎನ್.,  ಪ್ರಮುಖರಾದ ಪಿ.ವಿ. ಮೋಹನ್, ಶ್ರೀನಿವಾಸ ವೇಲು, ಗಂಗಾಧರ ಗೌಡ, ಮುಗುಳಿ ನಾರಾಯಣ ರಾವ್,  ಹುಚ್ಚೇ ಗೌಡ, ಅಡ್ಕಾಡಿ ಜಗನ್ನಾಥ ಗೌಡ,  ಕಸ್ತೂರಿ ಪಂಜ,  ಎಚ್. ಪದ್ಮಕುಮಾರ್, ವೇದಾವತಿ,  ಸದಾಶಿವ ಬಂಗೇರ, ಆರ್. ಕೆ. ಪೃಥ್ವಿರಾಜ್ ಎಡಪದವು,  ಆರ್.ಸ್ವಾಮಿ, ಯಶೋಧ ಕೃಷ್ಣಪ್ಪ ಕುಲಾಲ್, ಅನಿಲ್ ದಾಸ್,  ವಲಯ ಅರಣ್ಯಾಧಿಕಾರಿ ಮಂಜಪ್ಪ ಮೂಲ್ಯ, ಡಾ. ಜಯರಾಜ್ ಪ್ರಕಾಶ್,  ಗೋಪಾಲ್ ಕುಲಾಲ್ ಗೋವಿಂದ ತೋಟ  ಇದ್ದರು.

ಕಾರ್ಯಕ್ರಮಕ್ಕೂ ಮೊದಲು ಬೃಹತ್ ಹಕ್ಕೊತ್ತಾಯ ಜಾಥಾ ನಡೆಯಿತು. ಜಾಥಾಕ್ಕೆ ಚಲನಚಿತ್ರ ನಟ ಯಜ್ಞೇಶ್ ಕುಲಾಲ್ ಚಾಲನೆ ನೀಡಿದರು. ನಿರ್ವಹಣಾ ಸಮಿತಿ ಅಧ್ಯಕ್ಷ ಮೋಹನ ಬಂಗೇರ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಎಚ್. ಪದ್ಮಕುಮಾರ್ ಪ್ರಸ್ತಾವಿಸಿದರು. ಜಗನ್ನಾಥ್ ವಂದಿಸಿದರು. ನವೀನ್ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.