ADVERTISEMENT

ಮುಡಿಪು | ವಿದ್ಯುತ್ ಆಘಾತದಿಂದ ಗೆಳತಿಯನ್ನು ರಕ್ಷಿಸಿದ ಬಾಲಕಿ ಅಶ್ಫಿಯಾ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 13:48 IST
Last Updated 19 ಜೂನ್ 2024, 13:48 IST
<div class="paragraphs"><p>ಫಾತಿಮತುಲ್ ಅಶ್ಫಿಯಾ,</p></div>

ಫಾತಿಮತುಲ್ ಅಶ್ಫಿಯಾ,

   

ಮುಡಿಪು: ವಿದ್ಯುತ್‌ ಆಘಾತದಿಂದ ಪ್ರಾಣಾಪಾಯಕ್ಕೆ ಸಿಲುಕಿದ್ದ ತನ್ನ ಗೆಳತಿಯನ್ನು ವಿದ್ಯಾರ್ಥಿನಿಯೊಬ್ಬರು ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ಮುಡಿಪು ಸಮೀಪದ ಇರಾ ಗ್ರಾಮದಲ್ಲಿ ಈಚೆಗೆ ನಡೆದಿದೆ.

ಇರಾದ ಸರ್ಕಾರಿ ಪ್ರಾಥಮಿಕ ಶಾಲೆಯ  5 ನೇ ತರಗತಿ ವಿದ್ಯಾರ್ಥಿನಿ ಶರಫೀಯ ಮಧ್ಯಾಹ್ನ ಊಟದ ಸಮಯದಲ್ಲಿ ಫ್ಯಾನ್ ಸ್ವಿಚ್ ಹಾಕಲು ಹೋಗಿದ್ದ ವೇಳೆ ವಿದ್ಯುತ್ ಸ್ಪರ್ಶವಾಗಿತ್ತು. ಆಕೆ ಗೋಡೆಗೆ ಒರಗಿಕೊಂಡು ಮೌನವಾಗಿದ್ದನ್ನು ಗಮನಿಸಿದ ಸಹಪಾಠಿ ಫಾತಿಮತುಲ್ ಅಶ್ಫಿಯಾ, ಕೂಡಲೇ ತನ್ನ ಕೈಯಲ್ಲಿ ಊಟಕ್ಕಾಗಿ ಹಿಡಿದಿದ್ದ ಬಟ್ಟಲನ್ನು ಗೆಳತಿಯ ಕೈಗೆ ಎಸೆದು, ಆಕೆಯನ್ನು ರಕ್ಷಣೆ ಮಾಡಿದ್ದಳು. ಶರಫೀಯ ಕೈಗೆ ತರಚಿದ ಗಾಯವಾಗಿದ್ದು ಬಿಟ್ಟರೆ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾಳೆ.

ADVERTISEMENT

‘ಬಾಲಕಿಗೆ ವಿದ್ಯುತ್ ಸ್ಪರ್ಶವಾದಾಗ ಫಾತಿಮತುಲ್ ಅಶ್ಫಿಯಾ ಬಟ್ಟಲು ಎಸೆದು ಆಕೆಯನ್ನು ರಕ್ಷಣೆ ಮಾಡಿದ್ದಾಳೆ. ವಿದ್ಯಾರ್ಥಿನಿಯರ ಪೋಷಕರಲ್ಲೂ ಈ ಬಗ್ಗೆ ಮಾತನಾಡಿದ್ದೇವೆ’ ಎಂದು ಶಾಲೆಯ ಮುಖ್ಯೋಪಾಧ್ಯಾಯಿನಿ ಸೋನಿಕಾ ಹೇಳಿದರು.

ಫಾತಿಮತುಲ್ ಅಶ್ಫಿಯಾ ತಂದೆ ಮುಜಿಬ್ ರಹ್ಮಾನ್ ಮಾತನಾಡಿ,‌ ಮಗಳು ಮನೆಗೆ ಬಂದು ವಿದ್ಯುತ್ ಸ್ಪರ್ಶದಿಂದ ಅಪಾಯದಲ್ಲಿದ್ದ ತನ್ನ ಗೆಳತಿಯ ರಕ್ಷಣೆ ಮಾಡಿದ್ದನ್ನು ಹೇಳಿದಳು. ಆಕೆಯ ಸಾಹಸ ಹೆಮ್ಮೆಯ ಸಂಗತಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.