ADVERTISEMENT

ಮೂಡುಬಿದಿರೆ: ಕಲ್ಲಮುಂಡ್ಕೂರಿನಲ್ಲಿ ಬೋನಿಗೆ ಬಿದ್ದ ಚಿರತೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 13:34 IST
Last Updated 1 ಅಕ್ಟೋಬರ್ 2024, 13:34 IST
ಮೂಡುಬಿದಿರೆ ಸಮೀಪದ ಕಲ್ಲಮುಂಡ್ಕೂರಿನಲ್ಲಿ ಮಂಗಳವಾರ ಬೋನಿನಲ್ಲಿ ಸೆರೆಯಾದ ಚಿರತೆ  
ಮೂಡುಬಿದಿರೆ ಸಮೀಪದ ಕಲ್ಲಮುಂಡ್ಕೂರಿನಲ್ಲಿ ಮಂಗಳವಾರ ಬೋನಿನಲ್ಲಿ ಸೆರೆಯಾದ ಚಿರತೆ     

ಮೂಡುಬಿದಿರೆ: ಕೆಲವು ದಿನಗಳಿಂದ ತಾಲ್ಲೂಕಿನ ಕಲ್ಲಮುಂಡ್ಕೂರು ಸುತ್ತಲಿನ ಪ್ರದೇಶದಲ್ಲಿ  ಓಡಾಡುತ್ತಾ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ, ಅರಣ್ಯ ಇಲಾಖೆ ಇರಿಸಿದ ಬೋನಿನಲ್ಲಿ ಮಂಗಳವಾರ ಸೆರೆಯಾಗಿದೆ.

ಪಂಚಾಯಿತಿ ಸದಸ್ಯ ವಸಂತ್ ಮತ್ತು ಗ್ರಾಮಸ್ಥರು, ಚಿರತೆ ಸೆರೆಹಿಡಿಯುವಂತೆ ಮೂಡುಬಿದಿರೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದರು. ಎಸಿಎಫ್ ಪಿ.ಶ್ರೀಧರ್ ಹಾಗೂ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಜಿ. ಮಾರ್ಗದರ್ಶನದಲ್ಲಿ ಕಳಸಬೈಲು ಎಂಬಲ್ಲಿ ಮೂರು ದಿನಗಳ ಹಿಂದೆ ಬೋನು ಇರಿಸಲಾಗಿತ್ತು. ಮಂಗಳವಾರ ಬೆಳಗಿನ ಜಾವ ಚಿರತೆ ಬೋನಿಗೆ ಬಿದ್ದಿದೆ.

ಮೂಡುಬಿದಿರೆ ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಗಾಣಿಗ, ಗಸ್ತು ಅರಣ್ಯ ಪಾಲಕ ರಾಜೇಶ್ ಸ್ಥಳಕ್ಕೆ ಬಂದು, ಚಿರತೆ ಇದ್ದ ಬೋನು ವಶಕ್ಕೆ ಪಡೆದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.