ADVERTISEMENT

ಕಾಸರಗೋಡು ಜಿಲ್ಲೆಗೆ ಏಮ್ಸ್ ಆಸ್ಪತ್ರೆ ಅನಿವಾರ್ಯ: ಸಂಸದ ರಾಜ್ ಮೋಹನ್ ಉಣ್ಣಿತ್ತಾನ್

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 14:00 IST
Last Updated 15 ಜೂನ್ 2024, 14:00 IST

ಕಾಸರಗೋಡು: ಜಿಲ್ಲೆಗೆ ಏಮ್ಸ್ ಆಸ್ಪತ್ರೆ ಅನಿವಾರ್ಯವಾಗಿದ್ದು, ಕಳೆದ 5 ವರ್ಷ ಈ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದೆ ಎಂದು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ತಿಳಿಸಿದರು.

ಎಂಡೋಸಲ್ಫಾನ್ ಸಂತ್ರಸ್ತರ ಸಹಿತ ಗಂಭೀರ ಆರೋಗ್ಯ ಸಮಸ್ಯೆ ಹೊಂದಿರುವ ಜನ ಜಿಲ್ಲೆಯಲ್ಲಿದ್ದು, ಅವರಿಗೆ ಪರಿಣಾಮಕಾರಿ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಏಮ್ಸ್ ಆಸ್ಪತ್ರೆ ಅಗತ್ಯ ಎಂದು ಅವರು ಕಾಞಂಗಾಡು ಪ್ರೆಸ್ ಫಾರಂನಲ್ಲಿ ನಡೆದ ಮುಖಾಮುಖಿ ಕಾರ್ಯಕ್ರಮದಲ್ಲಿ ತಿಳಿಸಿದರು.

ರಾಜ್ಯಾಡಳಿತವು ಕೋಯಿಕೋಡ್‌ನಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪನೆಗೆ ಆಸಕ್ತಿ ಹೊಂದಿದ್ದು, ಕಾಸರಗೋಡಿನ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ. ಜಿಲ್ಲೆಯಲ್ಲಿ ಅನೇಕ ಸರ್ಕಾರಿ ಆಸ್ಪತ್ರೆಗಳಿದ್ದರೂ, ಶಸ್ತ್ರಚಿಕಿತ್ಸೆ ಸಹಿತ ಚಿಕಿತ್ಸೆಗಳಿಗೆ ಸೌಲಭ್ಯಗಳ ಕೊರತೆಯಿದೆ ಎಂದರು.

ADVERTISEMENT

ರಾಜಕೀಯ ಭಿನ್ನತೆ ಮರೆತು ಎಲ್ಲ ಪಕ್ಷಗಳೂ ಈ ಸಂಬಂಧ ಕೈಜೋಡಿಬೇಕಿದೆ ಎಂದು ಹೇಳಿದರು.

ಟಿ.ಕೆ.ನಾರಾಯಣನ್ ಅಧ್ಯಕ್ಷತೆ ವಹಿಸಿದ್ದರು. ಫಝಲ್ ರಹಮಾನ್, ಬಾಬು ಕೊಟ್ಟಪಾರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.