ADVERTISEMENT

ಮೂಡುಬಿದಿರೆ: ಹಳೆ ವಿದ್ಯಾರ್ಥಿಯಿಂದ ಕಾಲೇಜಿಗೆ ಕಾಂಕ್ರೀಟ್ ರಸ್ತೆ ಕೊಡುಗೆ 

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 5:33 IST
Last Updated 20 ಜೂನ್ 2024, 5:33 IST
ಚಿತ್ರ:19ಎಂಡಿಬಿ1 ಮೂಡುಬಿದಿರೆಯ ಧವಳಾ ಕಾಲೇಜು ರಸ್ತೆಗೆ ಹಳೆ ವಿದ್ಯಾಥರ್ಿ ಬೆನೆಡಿಕ್ಟ ಸೆರಾವೊ ಕಾಂಕ್ರೀಟ್ ವ್ಯವಸ್ಥೆ ಮಾಡಿಸಿದರು 
ಚಿತ್ರ:19ಎಂಡಿಬಿ1 ಮೂಡುಬಿದಿರೆಯ ಧವಳಾ ಕಾಲೇಜು ರಸ್ತೆಗೆ ಹಳೆ ವಿದ್ಯಾಥರ್ಿ ಬೆನೆಡಿಕ್ಟ ಸೆರಾವೊ ಕಾಂಕ್ರೀಟ್ ವ್ಯವಸ್ಥೆ ಮಾಡಿಸಿದರು    

ಮೂಡುಬಿದಿರೆ: ವಿದ್ಯಾರ್ಥಿಯೊಬ್ಬ ತಾನು ಕಲಿತ ಕಾಲೇಜಿಗೆ ಕಾಂಕ್ರೀಟ್‌ ರಸ್ತೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ತಾಕೋಡೆಯ ಬೆನೆಡಿಕ್ಟ ಸೆರಾವೊ ಇಲ್ಲಿನ ಧವಳಾ ಕಾಲೇಜಿನ 1997ರ ವರ್ಷದ ವಿದ್ಯಾರ್ಥಿ. ಸದ್ಯ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದಾರೆ.

ಮೂಡುಬಿದಿರೆ ಮುಖ್ಯ ರಸ್ತೆಯಿಂದ ಧವಳಾ ಕಾಲೇಜಿಗೆ ಹೋಗುವ ರಸ್ತೆ ಕೆಟ್ಟು ಹೋಗಿದ್ದು, ಕಾಲೇಜಿಗೆ ವಾಹನದಲ್ಲಿ ಬರುವ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ತೊಂದರೆ ಆಗುತ್ತಿತ್ತು. ಇದನ್ನು ಮನಗಂಡ ಬೆನೆಡಿಕ್ಟ ಸುಮಾರು ₹3.50 ಲಕ್ಷ ಖರ್ಚು ಮಾಡಿ ಕಾಂಕ್ರೀಟ್ ವ್ಯವಸ್ಥೆ ಮಾಡಿದ್ದಾರೆ.

ಬೆನಡಿಕ್ಟ್‌ ಅವರ ಸಹಪಾಠಿ ಪಡುಮಾರ್ನಾಡು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಮೇಶ್ ಶೆಟ್ಟಿ ಕಾಮಗಾರಿಯ ಉಸ್ತುವಾರಿ ನೋಡಿಕೊಂಡಿದ್ದಾರೆ. ಬೆನೆಡಿಕ್ಟ ಅವರ ಕಾರ್ಯಕ್ಕೆ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT
ಬೆನೆಡಿಕ್ಟ ಸೆರಾವೊ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.