ADVERTISEMENT

ಸಿ.ಎ ಇಂಟರ್ ಮೀಡಿಯೆಟ್ ಪರೀಕ್ಷೆ: ಆಳ್ವಾಸ್ ಸಾಧನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2023, 19:30 IST
Last Updated 6 ಜುಲೈ 2023, 19:30 IST
ದೀಪಕ್‌ ಹೆಗ್ಡೆ
ದೀಪಕ್‌ ಹೆಗ್ಡೆ   

ಮೂಡುಬಿದಿರೆ (ದಕ್ಷಿಣ ಕನ್ನಡ): ಸಿ.ಎ. ಇಂಟರ್‌ಮೀಡಿಯೆಟ್‌ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿಗಳಾದ ದೀಪಕ್ ಹೆಗ್ಡೆ, ಪ್ರಜ್ವಲ್ ಎ.ಮೂಲ್ಯ ಅಖಿಲ ಭಾರತ ಮಟ್ಟದಲ್ಲಿ ಕ್ರಮವಾಗಿ 10 ಮತ್ತು 50ನೇ ರ್‍ಯಾಂಕ್‌ ಗಳಿಸಿದ್ದಾರೆ.

ದೀಪಕ್ ಹೆಗ್ಡೆ ಅವರು ಬೆಳ್ತಂಗಡಿ ತಾಲ್ಲೂಕಿನ ಬಜಿರೆ ಮುದ್ದಾಡಿಯ ದಿವಾಕರ ಹೆಗ್ಡೆ-ನಳಿನಿ ಹೆಗ್ಡೆ ದಂಪತಿ ಪುತ್ರ. ತಾಯಿ ಗೃಹಿಣಿಯಾಗಿದ್ದು, ಅವರ ತಂದೆ ಗೂಡಂಗಡಿ ವ್ಯಾಪಾರಿ.

ಆಳ್ವಾಸ್ ಕನ್ನಡ ಹೈಸ್ಕೂಲ್‌ನಲ್ಲಿ ಎಸ್‌ಎಸ್‌ಎಲ್‌ಸಿ, ಅದೇ ಸಂಸ್ಥೆಯಲ್ಲಿ ಪಿಯು ಓದಿದ್ದಾರೆ.

ADVERTISEMENT

ಆಳ್ವಾಸ್‌ ಸಂಸ್ಥೆಯಲ್ಲಿ ಉತ್ತಮ ತರಬೇತಿ, ಅಣಕು ಪರೀಕ್ಷೆ, ಕಠಿಣ ಪರಿಶ್ರಮ ಈ ಸಾಧನೆಗೆ ನೆರವಾಯಿತು ಎಂದು ದೀಪಕ್ ಹೆಗ್ಡೆ ಹೇಳಿದರು. ಸಿ.ಎ ಫೌಂಡೇಷನ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಅಗ್ರ ಸ್ಥಾನ ಗಳಿಸಿದ್ದರು.

ಕಲ್ಲಬೆಟ್ಟು ಗ್ರಾಮದ ಆನಂದ ಮೂಲ್ಯ– ಲಲಿತಾ ಮೂಲ್ಯ ದಂಪತಿಯ ಪುತ್ರ ಪ್ರಜ್ವಲ್ ಮೂಲ್ಯ 50ನೇ ರ್‍ಯಾಂಕ್‌ ಪಡೆದಿದ್ದಾರೆ.

ಸುರತ್ಕಲ್ ಕೃಷ್ಣಾಪುರದ ವಿಶ್ವನಾಥ ಶೆಟ್ಟಿಗಾರ್- ಊರ್ಮಿಳಾ ದಂಪತಿಯ ಪುತ್ರ, ಕಣ್ಣು ಕಾಣಿಸದ ವಿದ್ಯಾರ್ಥಿ ಆಳ್ವಾಸ್‌ ಸಂಸ್ಥೆಯ ಜಯೇಶ್ ಸಿ.ಎ. ಇಂಟರ್‌ಮೀಡಿಯೆಟ್‌ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ. ಈ ದಂಪತಿಯ ತ್ರಿವಳಿ ಮಕ್ಕಳ ಪೈಕಿ ಜೀವನ್ ಮತ್ತು ಜಿತೇಶ್ ಅವರಿಗೆ ಕೂಡ ಕಣ್ಣು ಕಾಣಿಸುವುದಿಲ್ಲ. ಅವರೂ ಸಿ.ಎ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿದ್ದಾರೆ.

ಪ್ರಜ್ವಲ್‌
ಜಯೇಶ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.