ADVERTISEMENT

ಫುಟ್‌ಬಾಲ್‌: ಆಳ್ವಾಸ್ ತಂಡಕ್ಕೆ ಚಾಂಪಿಯನ್ ಪಟ್ಟ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2023, 6:45 IST
Last Updated 23 ಸೆಪ್ಟೆಂಬರ್ 2023, 6:45 IST
ಪ್ರಶಸ್ತಿ ಗೆದ್ದ ಆಳ್ವಾಸ್ ಫಿಸಿಯೊಥರಪಿ ಕಾಲೇಜು ತಂಡ. ಹಿಂದಿನ ಸಾಲು (ಎಡದಿಂದ): ಜುಬಿನ್‌, ಪ್ರಣವ್‌, ಸಹದ್‌, ವಿನೋದ್‌, ಮಧು (ಕೋಚ್‌), ಅವಿನಾಶ್‌ (ದೈಹಿಕ ಶಿಕ್ಷಣ ನಿರ್ದೇಶಕ), ಅಲಿ, ಆದಿಲ್‌, ಮಿಲನ್‌ ಮತ್ತು ವಿನೋದ್‌.  ಮುಂದಿನ ಸಾಲು: ಅಬು ತಾಹಿರ್‌, ರೋಶ್‌, ಸಂದೀಪ್‌, ರುಮಾನ್‌, ಮುಖ್ತರ್‌, ಪ್ರತ್ಯೂಷ್‌, ದರ್ಶನ್‌ 

ಮೂಡುಬಿದಿರೆ: ರೋಚಕ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್‌ ಮೂಲಕ ಕಣಚೂರು ಎಎಚ್‌ಎಚ್ ಸಂಸ್ಥೆಯ ವಿರುದ್ಧ ಜಯ ಗಳಿಸಿದ ಆತಿಥೇಯ ಆಳ್ವಾಸ್ ಫಿಸಿಯೊಥೆರಪಿ ಕಾಲೇಜು ತಂಡ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈಸೂರು ವಲಯ ಫುಟ್‌ಬಾಲ್ ಟೂರ್ನಿಯ ಪುರುಷರ ವಿಭಾಗದ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಅರಮನೆ ಮೈದಾನದಲ್ಲಿ ಶುಕ್ರವಾರ ಸಂಜೆ ನಡೆದ ಫೈನಲ್ ಪಂದ್ಯದಲ್ಲಿ 5–3ರಲ್ಲಿ ಆಳ್ವಾಸ್ ಕಾಲೇಜು ಜಯ ಸಾಧಿಸಿತು.  

ಸೆಮಿಫೈನಲ್‌ನಲ್ಲಿ ಎಸ್‌ಸಿಎಸ್‌ ನರ್ಸಿಂಗ್ ಕಾಲೇಜು ವಿರುದ್ಧ 2–1ರಲ್ಲಿ ಗೆದ್ದ ಆಳ್ವಾಸ್ ಮತ್ತು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಎದುರು 2–0ಯಿಂದ ಗೆದ್ದ ಕಣಚೂರು ಕಾಲೇಜು ತಂಡಗಳ ನಡುವಿನ ಪ್ರಶಸ್ತಿ ಸುತ್ತಿನ ಹಣಾಹಣಿ ಜಿದ್ದಾಜಿದ್ದಿಯ ಕಾದಾಟಕ್ಕೆ ಸಾಕ್ಷಿಯಾಯಿತು. ನಿಗದಿತ ಅವಧಿಯಲ್ಲಿ ಎರಡೂ ತಂಡಗಳಿಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಫಲಿತಾಂಶ ನಿರ್ಣಯಿಸಲು ಪೆನಾಲ್ಟಿ ಶೂಟೌಟ್ ಮೊರೆಹೋಗಲಾಯಿತು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.