ADVERTISEMENT

ಆಳ್ವಾಸ್ ಪುರುಷ, ಮಹಿಳಾ ತಂಡಗಳಿಗೆ ಚಾಂಪಿಯನ್ ಪಟ್ಟ

ಮಂಗಳೂರು ವಿವಿ ಅಂತರ ಕಾಲೇಜು ಕುಸ್ತಿ: ಗೋಕರ್ಣನಾಥ, ವಿವಿ ಕ್ಯಾಂಪಸ್ ರನ್ನರ್ ಅಪ್‌

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2023, 15:43 IST
Last Updated 23 ನವೆಂಬರ್ 2023, 15:43 IST
ಪುರುಷರ ವಿಭಾಗದಲ್ಲಿ ಚಾಂಪಿಯನ್‌ ಆದ ಆಳ್ವಾಸ್ ಕಾಲೇಜು ತಂಡದ ಆಟಗಾರರು ಗಣ್ಯರ ಜೊತೆ ಸಂಭ್ರಮಿಸಿದರು
ಪುರುಷರ ವಿಭಾಗದಲ್ಲಿ ಚಾಂಪಿಯನ್‌ ಆದ ಆಳ್ವಾಸ್ ಕಾಲೇಜು ತಂಡದ ಆಟಗಾರರು ಗಣ್ಯರ ಜೊತೆ ಸಂಭ್ರಮಿಸಿದರು   

ಮಂಗಳೂರು: ಎಲ್ಲ ದೇಹತೂಕ ವಿಭಾಗಗಳಲ್ಲೂ ಪಾರಮ್ಯ ಮೆರೆದ ಆಳ್ವಾಸ್ ಪುರುಷ ಮತ್ತು ಮಹಿಳಾ ತಂಡಗಳು ಮಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಕುಸ್ತಿ ಚಾಂಪಿಯನ್‌ಷಿಪ್‌ನ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡವು.

ನಗರದ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಬಿ.ದೇವದಾಸ್ ಕಲಾ ಮಂಟಪದಲ್ಲಿ ಗುರುವಾರ ಮುಕ್ತಾಯಗೊಂಡ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಆಳ್ವಾಸ್ ತಂಡ 67 ಪಾಯಿಂಟ್ ಗಳಿಸಿದರೆ ಮಹಿಳಾ ವಿಭಾಗದಲ್ಲಿ 54 ಪಾಯಿಂಟ್ ಬಗಲಿಗೆ ಹಾಕಿಕೊಂಡಿತು. 

27 ಪಾಯಿಂಟ್ ಗಳಿಸಿದ ಗೋಕರ್ಣನಾಥೇಶ್ವರ ಕಾಲೇಜು ಪುರುಷರ ವಿಭಾಗದ ರನ್ನರ್ ಅಪ್ ಸ್ಥಾನ ತನ್ನದಾಗಿಸಿಕೊಂಡಿತು. ಮಹಿಳಾ ವಿಭಾಗದಲ್ಲಿ 24 ಪಾಯಿಂಟ್ ಕಲೆ ಹಾಕಿದ ವಿಶ್ವವಿದ್ಯಾಲಯ ಕ್ಯಾಂಪಸ್ ತಂಡ ರನ್ನರ್ ಅಪ್ ಆಯಿತು. ಪುರುಷರ ವಿಭಾಗದಲ್ಲಿ ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜು (15 ಪಾಯಿಂಟ್ಸ್‌) ಮತ್ತು ಕುಂದಾಪುರದ ಭಂಡಾರ್ಕರ್ಸ್ ಕಾಲೇಜು (12 ಪಾಯಿಂಟ್ಸ್‌) ಕ್ರಮವಾಗಿ 3 ಮತ್ತು 4ನೇ ಸ್ಥಾನ ಗಳಿಸಿತು. 21 ಪಾಯಿಂಟ್‌ಗಳೊಂದಿಗೆ ಉಜಿರೆಯ ಎಸ್‌ಡಿಎಂ ಕಾಲೇಜು ಮತ್ತು 18 ಪಾಯಿಂಟ್‌ಗಳೊಂದಿಗೆ ಮಂಗಳೂರಿನ ಸೇಂಟ್ ಆ್ಯಗ್ನೆಸ್ ಕಾಲೇಜು ತಂಡ ಮಹಿಳಾ ವಿಭಾಗದಲ್ಲಿ ಕ್ರಮವಾಗಿ 3 ಮತ್ತು 4ನೇ ಸ್ಥಾನ ಪಡೆದುಕೊಂಡವು.

ADVERTISEMENT

ಎರಡನೇ ದಿನದ ಫಲಿತಾಂಶಗಳು

ಪುರಷರ ವಿಭಾಗ: 97+ ಕೆಜಿ: ಕಾರ್ತಿಕ್‌ ಎಸ್‌ (ಆಳ್ವಾಸ್‌)–1, ರಜತ್ (ಎಸ್‌ಎಂಎಸ್‌ ಬ್ರಹ್ಮಾವರ)–2, ನಿಹಾಲ್‌ (ಗೋಕರ್ಣನಾಥೇಶ್ವರ)–3, ಪ್ರಥಮ್‌ (ಬಿ.ಬಿ ಹೆಗ್ಡೆ ಕುಂದಾಪುರ)–3; 86 ಕೆಜಿ: ಕೀರ್ತಿ (ಆಳ್ವಾಸ್)–1, ಜಯಂತ್ (ಎಸ್‌ಎಂಎಸ್‌)–2, ನಂದಕೃಷ್ಣ (ವಿವಿ ಕಾಲೇಜು ಹಂಪನಕಟ್ಟ)–3, ಮಹಮ್ಮದ್ ಹಮೀದ್ (ಜಿಎಪ್‌ಜಿಸಿ ಉಪ್ಪಿನಂಗಡಿ)–3; 79 ಕೆಜಿ: ಚೇತನ್ (ಆಳ್ವಾಸ್‌)–1, ಜೀವನ್ (ಎಸ್‌ಡಿಎಂ ಉಜಿರೆ)–2, ‍ಪ್ರವೇಶ್‌ (ಮೂಡಲಕಟ್ಟೆ)–3, ಮಯೂರ್ (ಎಸ್‌ಡಿಎಂ ಉಜಿರೆ)–3; 74 ಕೆಜಿ: ಮನೋಜ್ (ವಿವಿ ಕ್ಯಾಂಪಸ್)–1, ಅವಿನಾಶ್‌ (ಶಾರದಾ ಕಾಲೇಜು, ಬಸ್ರೂರು)–2, ಅಬ್ದುಲ್ ಶಾಹಿಲ್ (ನಾರಾಯಣ ಗುರು ಕಾಲೇಜು)–3, ಶಿವರಾಜ್‌ (ಆಳ್ವಾಸ್‌)–3; 70 ಕೆಜಿ: ಸುರೇಂದ್ರ (ಆಳ್ವಾಸ್‌)–1, ಮಣಿಪ್ರಸಾದ್ (ಎಸ್‌ಡಿಎಂ)–2, ಗಣೇಶ್ (ಭಂಡಾರ್ಕರ್ಸ್‌)–3, ಚಿರಾಗ್‌ (ಗೋವಿಂದದಾಸ್‌ ಸುರತ್ಕಲ್‌)–3; 65 ಕೆಜಿ: ರಾಕೇಶ್ (ಆಳ್ವಾಸ್‌)–1, ಆಕಾಶ್‌ (ಎಸ್‌ಜಿಸಿ)–2, ಸಂತೋಷ್ (ಗೋಕರ್ಣನಾಥೇಶ್ವರ)–3, ಸುಶಾಂತ್‌ (ಭಂಡಾರ್ಕರ್ಸ್‌)–3; 61 ಕೆಜಿ: ಗುಡ್ಡಪ್ಪ (ಆಳ್ವಾಸ್‌)–1, ಧರ್ಮರಾಜ್ (ಎಸ್‌ಜಿಡಿ)–2, ವಿನಯನ್ (ಭಂಡಾರ್ಕರ್ಸ್‌)–3, ನಿಖಿಲ್ (ಎಸ್‌ಡಿಎಂ ಉಜಿರೆ)–3; 57 ಕೆಜಿ: ಪ್ರಕಾಶ್ (ಎಸ್‌ಜಿಸಿ)–1, ಇಶಾನ್‌ (ಶ್ರೀ ನಾರಾಯಣಗುರು ಕಾಲೇಜು)–2, ಕುಮಾರ್ (ಗೋಕರ್ಣನಾಥೇಶ್ವರ)–3, ಮಂಜುನಾಥ ಕನಕಪ್ಪ (ಶಾರದಾ, ಬಸ್ರೂರು)–3. ಮಹಿಳೆಯರ 76 ಕೆಜಿ: ಧನ್ಯ (ಆಳ್ವಾಸ್‌)–1, ಪ್ರತೀಷಾ (ಕೆನರಾ)–2; 72 ಕೆಜಿ: ಖುಷಿ (ಪೂರ್ಣಪ್ರಜ್ಞ, ಉಡುಪಿ)–1, ಶಿಲ್ಪಾ (ವಿವಿ ಕಾಲೇಜು, ಹಂಪನಕಟ್ಟ)–2, ಸಿಂಚನಾ (ವೆಂಕಟರಮಣ, ಕಾರ್ಕಳ)–3, ದಿವ್ಯಾ ಪೂಜಾರಿ (ವಿವಿ ಕ್ಯಾಂಪಸ್‌)–3; 68 ಕೆಜಿ: ಅಸ್ನಾ (ಆಳ್ವಾಸ್‌)–1, ಶಾಜಾ (ಸೇಂಟ್ ಆ್ಯಗ್ನೆಸ್‌)–2, ದಿಶಾ (ವಿವಿ ಕಾಲೇಜು, ಹಂಪನಕಟ್ಟ)–3, ನಿವೇದಿತಾ (ಗೋಕರ್ಣನಾಥೇಶ್ವರ)–3; 65 ಕೆಜಿ: ವೈಶಾಲಿ (ಆಳ್ವಾಸ್‌)–1, ಆ್ಯಶೆಲ್‌ (ವಿವಿ ಕ್ಯಾಂಪಸ್‌)–2, ತಾರಾ (ಎಸ್‌ಡಿಎಂ ಉಜಿರೆ)–3, ಮೇಘನಾ ಸಿ (ಜಿಎಫ್‌ಜಿಸಿ ಉಪ್ಪಿನಂಗಡಿ)–3; 62 ಕೆಜಿ: ಅದಿತಿ (ಸೇಂಟ್ ಆ್ಯಗ್ನೆಸ್‌)–1, ಸುಧೀಕ್ಷಾ (ಎಸ್‌ಡಿಎಂ ಉಜಿರೆ)–2, ದೀಪಿಕಾ (ಗೋಕರ್ಣನಾಥೇಶ್ವರ)–3, ದೀಪಾ (ವಿವಿ ಕ್ಯಾಂಪಸ್‌)–3; 59 ಕೆಜಿ: ಕಾವ್ಯಾ (ವಿವಿ ಕ್ಯಾಂಪಸ್‌)–1, ಪ್ರೀಶಾ (ಸೇಂಟ್ ಆ್ಯಗ್ನೆಸ್‌)–2, ನಿಕ್ಷಿತಾ (ಎಸ್‌ಡಿಎಂ)–3, ಪ್ರೇಕ್ಷಾ (ಆಳ್ವಾಸ್)–3; 57 ಕೆಜಿ: ಸಹನಾ (ಆಳ್ವಾಸ್‌)–1, ನಿಕಿತಾ (ಎಸ್‌ಜಿಸಿ)–2, ಪ್ರತ್ಯೂಷಾ (ವಿವಿ ಕ್ಯಾಂಪಸ್‌)–3; 55 ಕೆಜಿ: ಚಂದ್ರಿಕಾ (ಆಳ್ವಾಸ್‌)–1, ಹರಿಣಿ (ವಿವಿ ಕ್ಯಾಂಪಸ್)–2, ವಿಜಯಲಕ್ಷ್ಮಿ (ಜಿಎಫ್‌ಜಿಸಿ ಕಾರ್ ಸ್ಟ್ರೀಟ್‌)–3, ರಮ್ಯಾ (ಎಸ್‌ಜಿಸಿ)–3; 53 ಕೆಜಿ: ಆಕಾಂಕ್ಷಾ (ಆಳ್ವಾಸ್‌)–1, ಮನೀಷಾ (ಎಸ್‌ಡಿಎಂ ಉಜಿರೆ)–2, ದಿವ್ಯಾ (ವಿವಿ ಕಾಲೇಜು ಹಂಪ‍ನಕಟ್ಟ)–3, ನಳಿನಾಕ್ಷಿ (ಜಿಎಫ್‌ಜಿಸಿ ವಾಮದಪದವು)–3; 50 ಕೆಜಿ: ರಂಜಿತಾ (ಆಳ್ವಾಸ್‌)–1, ಚಂದ್ರಿಕಾ (ಎಸ್‌ಡಿಎಂ ಉಜಿರೆ)–2, ಶ್ರದ್ಧಾ (ಹಂಪನಕಟ್ಟ)–3, ಸಾಕ್ಷ (ಜಿಎಫ್‌ಜಿಸಿ ಕಾರ್‌ಸ್ಟ್ರೀಟ್‌)–3.   

ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಆದ ಆಳ್ವಾಸ್ ಕಾಲೇಜು ತಂಡದ ಆಟಗಾರರು ಗಣ್ಯರ ಜೊತೆ ಸಂಭ್ರಮಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.