ADVERTISEMENT

ಮುಡಿಪು ವೃತ್ತಕ್ಕೆ ಅಮ್ಮೆಂಬಳ ಬಾಳಪ್ಪ‌ ಹೆಸರು

ಅಮ್ಮೆಂಬಳ ಬಾಳಪ್ಪ‌ ವೃತ್ತ; ನನಸಾಗಲಿರುವ ಕನಸು

ಸತೀಶ್ ಕೊಣಾಜೆ
Published 26 ಜನವರಿ 2024, 7:16 IST
Last Updated 26 ಜನವರಿ 2024, 7:16 IST
ಡಾ.ಅಮ್ಮೆಂಬಳ ಬಾಳಪ್ಪ
ಡಾ.ಅಮ್ಮೆಂಬಳ ಬಾಳಪ್ಪ   

ಮುಡಿಪು: ಮುಡಿಪುವಿನ ಕಾಯೆರೆಗೋಳಿ ವೃತ್ತಕ್ಕೆ ಸ್ವಾತಂತ್ರ್ಯ ಹೋರಾಟಗಾರ ಅಮ್ಮೆಂಬಳ ಬಾಳಪ್ಪರ ಹೆಸರಿಡಬೇಕು ಮತ್ತು ಇಲ್ಲಿ ಬಾಳಪ್ಪರ ಪ್ರತಿಮೆ ನಿರ್ಮಾಣವಾಗಬೇಕು ಎಂಬ ಜನರ ದಶಕಗಳ ಕನಸು ನನಸಾಗುವ ಸಮಯ ಹತ್ತಿರ ಬಂದಿದೆ. ಜ.28ರಂದು ವೃತ್ತ ನಿರ್ಮಾಣಕ್ಕೆ ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಚಾಲನೆ ನೀಡಲಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರಾಗಿ, ಭೂಸುಧಾರಣೆಯ ಹರಿಕಾರರಾಗಿ ಬದುಕು ಸಾಗಿಸಿದವರು ಅಮ್ಮೆಂಬಳ ಬಾಳಪ್ಪರು.


ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ದೇಶದ ಉದ್ದಗಲಕ್ಕೂ ಸಂಚರಿಸಿ, ಹೋರಾಟ ಮಾಡಿದ್ದರು. ತಮ್ಮ ವೈಯುಕ್ತಿಕ ಬದುಕನ್ನು ಬದಿಗಿರಿಸಿ ದೇಶ ಸೇವೆಗಾಗಿ ಬದುಕು ಮುಡಿಪಾಗಿರಿಸಿದ್ದರು. ಸ್ವಾತಂತ್ರ ಹೋರಾಟಗಾರನಿಗೆ ಹುಟ್ಟೂರಿನ ಗೌರವ ಎನ್ನುವಂತೆ ಇಲ್ಲಿ ವೃತ್ತ ನಿರ್ಮಿಸಿ, ಅವರ ಹೆಸರಿಡುವಂತೆ ಮುಡಿಪು ಕುಲಾಲ ಸಂಘದ ವತಿಯಿಂದ ಶಾಸಕ ಯು.ಟಿ.ಖಾದರ್ ಅವರಿಗೆ ಮನವಿ ಮಾಡಲಾಗಿತ್ತು.‌

ADVERTISEMENT

ಕಾಯೆರ್ ಗೋಳಿ ಬಳಿ ನಿರ್ಮಾಣವಾಗಲಿರುವ ಅಮ್ಮೆಂಬಳ ಬಾಳಪ್ಪರ ವೃತ್ತವು ಮುಖ್ಯವಾಗಿ ವಿಟ್ಲ - ಬಿ.ಸಿ.ರೋಡ್ - ಮಂಗಳೂರನ್ನು ಸಂಪರ್ಕಿಸುವ ಮುಖ್ಯ ವೃತ್ತವಾಗಿ ಗುರುತಿಸಿಕೊಳ್ಳಲಿದೆ.

ಅಮ್ಮೆಂಬಳ ಬಾಳಪ್ಪ ವೃತ್ತ ನಿರ್ಮಾಣಗೊಳ್ಳಲಿರುವ ಪ್ರದೇಶ
ಮುಂದಿನ ಪೀಳಿಗೆಯವರು ಇಂತಹ ಮಹಾನ್ ವ್ಯಕ್ತಿಗಳನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಬಾಳಪ್ಪರ ಜನ್ಮ ಶತಾಬ್ಧಿ ಆಚರಣೆಯಲ್ಲಿ ವೃತ್ತ ಪ್ರತಿಮೆ ನಿರ್ಮಾಣದ ಭರವಸೆ ನೀಡಿದ್ದೆ ಅದರಂತೆ ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ.
–ಯು.ಟಿ.ಖಾದರ್ ವಿಧಾನಸಭಾ ಅಧ್ಯಕ್ಷ
ವೃತ್ತದ ಜತೆಗೆ ಅಮ್ಮೆಂಬಳ ಬಾಳಪ್ಪರ ಪ್ರತಿಮೆಯನ್ನೂ ನಿರ್ಮಿಸಿಕೊಡುವ ಭರವಸೆಯನ್ನು ಶಾಸಕ ಯು.ಟಿ ಖಾದರ್‌ ನೀಡಿದ್ದರು. ಇದೀಗ ನಮ್ಮ ಕನಸು ನನಸಾಗುವ ಸಮಯ ಬಂದಿದೆ.
ಪುಂಡರೀಕಾಕ್ಷ ಮುಡಿಪು ಕುಲಾಲ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.