ADVERTISEMENT

ಆತ್ಮಶಕ್ತಿ ಸಂಘ: ₹3.3 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 4:35 IST
Last Updated 7 ಏಪ್ರಿಲ್ 2024, 4:35 IST
ಚಿತ್ತರಂಜನ್ ಬೋಳಾರ್
ಚಿತ್ತರಂಜನ್ ಬೋಳಾರ್   

ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು 2023–24ನೇ ಆರ್ಥಿಕ ವರ್ಷದ ಅಂತ್ಯದಲ್ಲಿ ₹3.3 ಕೋಟಿಗೂ ಮಿಕ್ಕಿ ಲಾಭ ಗಳಿಸಿದೆ.

 ₹2,000 ಕೋಟಿಗೂ ಮೀರಿ ಆರ್ಥಿಕ ವಹಿವಾಟು ನಡೆಸಲಾಗಿದೆ. ₹225 ಕೋಟಿ ಮಿಕ್ಕಿ ಠೇವಣಿ, ₹1.48 ಕೋಟಿ ಪಾಲು ಬಂಡವಾಳ ಹಾಗೂ ₹178 ಕೋಟಿಗೂ ಅಧಿಕ ಸಾಲ ವಿತರಿಸಿದೆ ಎಂದು ಸಂಘದ ಅಧ್ಯಕ್ಷ  ಚಿತ್ತರಂಜನ್ ಬೋಳಾರ್‌ ತಿಳಿಸಿದ್ದಾರೆ.

ಸಂಘದ ದಶಮಾನೋತ್ಸವದ ಸಂದರ್ಭದಲ್ಲಿ ಸುಮಾರು 14,000 ಚದರ ಅಡಿಯ ಸ್ವಂತ ಕಟ್ಟಡವನ್ನು ಹೊಂದಿದ ದಕ್ಷಿಣ ಕನ್ನಡ ಜಿಲ್ಲೆಯ ಏಕಮಾತ್ರ ವಿವಿಧೋದ್ದೇಶ ಸಹಕಾರಿ ಸಂಘವಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 30 ಶಾಖೆಗಳು ಇದ್ದು, ಶೇ 95ರಷ್ಟು ಮಹಿಳಾ ಸಿಬ್ಬಂದಿ ಹೊಂದಿರುವ ಮೂಲಕ ಮಹಿಳಾ ಸಬಲೀಕರಣದ ಕಲ್ಪನೆಯನ್ನು ಅನುಷ್ಠಾನಗೊಳಿಸಿದೆ. ಬರುವ ದಿನಗಳಲ್ಲಿ ಕೊಡಗು, ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳಲ್ಲಿ ಶಾಖೆ ವಿಸ್ತರಿಸುವ ಯೋಜನೆ ಹಾಕಿಕೊಂಡಿದೆ ಎಂದಿದ್ದಾರೆ. 

ADVERTISEMENT

ಆಡಿಟ್ ವರ್ಗೀಕರಣದಲ್ಲಿ ‘ಎ’ ಗ್ರೇಡ್ ಹೊಂದಿರುವ ಸಂಘವು, ನಿರಂತರವಾಗಿ ಸದಸ್ಯರಿಗೆ ಲಾಭಾಂಶ ವಿತರಿಸುತ್ತಿದೆ. ಲಾಭಾಂಶದಲ್ಲಿ ಶೈಕ್ಷಣಿಕ, ಸಾಮಾಜಿಕ, ಆರೋಗ್ಯ ಕ್ಷೇತ್ರಗಳಲ್ಲಿ ಧನಸಹಾಯ ಮಾಡಲಾಗಿದೆ. ವೈದ್ಯಕೀಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಕನ್ನಡಕ ವಿತರಣೆ, ಆರೋಗ್ಯ ಕಾರ್ಡ್ ವಿತರಣೆಯನ್ನು ಉಚಿತವಾಗಿ ಮಾಡುತ್ತ, ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದೆ. 14,500ಕ್ಕೂ ಹೆಚ್ಚು ಜನರಿಗೆ ಸಂಘವು ಕನ್ನಡಕ ವಿತರಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.