ಮಂಗಳೂರು: ಆಸ್ಟ್ರೇಲಿಯಾದ ಮೆಲ್ಬರ್ನ್ ಪಶ್ಚಿಮದ ವಿಂಡಮ್ ಕನ್ನಡ ಬಳಗದ (ವಿಕೆಬಿ) ವತಿಯಿಂದ ಮೆಲ್ಬರ್ನ್‌ನ ವಿಲಿಯಮ್ಸ್ ಟೌನ್ ಹಾಲ್‌ನಲ್ಲಿ ಭಾನುವಾರ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ನಂದಳಿಕೆ ಮುದ್ದಣ ಪ್ರಕಾಶನವು ಪ್ರಕಟಿಸಿರುವ ಪಾದೆಕಲ್ಲು ವಿಷ್ಣು ಭಟ್ ಸಂಪಾದಿಸಿರುವ ಶ್ರೀರಾಮಾಶ್ವಮೇಧಂ’ ಹಾಗೂ ಕೆ.ಎಲ್.ಕುಂಡಂತಾಯ ಸಂಪಾದಿಸಿರುವ ರತ್ನಾವತಿ ಕಲ್ಯಾಣ ಮತ್ತು ಕುಮಾರಾವಿಜಯ ಪ್ರಸಂಗ ನಡೆ– ರಂಗತಂತ್ರ’ ಕೃತಿಗಳನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ವಿಂಡಮ್ ಕನ್ನಡ ಬಳಗದ ವನಿತಾ ಗಣೇಶ ಉಬರಳೆ ಸಂಪಾದಿಸಿದ ‘ಮಂದಾರ’ ಸ್ಮರಣ ಸಂಚಿಕೆ, ಸೌಜನ್ಯಾ ನಂದಳಿಕೆ ಸಂಪಾದಿಸಿದ ‘ಹೊಂಬಾಳೆ’ 50ನೇ ವರ್ಷದ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ಮುದ್ದಣ ಪ್ರಕಾಶನ ಸಂಸ್ಥೆಯ ಸ್ಥಾಪಕಾಧ್ಯಕ್ಷ ನಂದಳಿಕೆ ಬಾಲಚಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು. ವಿಂಡೆಮ್‌ನ ಮಾಜಿ ಕೌನ್ಸಿಲರ್ ಸಹನಾ ರಮೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಎಂ.ಪಿ. ಟಿಮ್ ವಾಟ್ಸ್ ಭಾಗವಹಿಸಿದ್ದರು.
ವಿಕೆಬಿ ಅಧ್ಯಕ್ಷ ಗಣೇಶ ಉಬರಳೆ ಸ್ವಾಗತಿಸಿದರು. ಕಾರ್ಯದರ್ಶಿ ಅನಿಲ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಚಿ ಕೀರ್ತನಾ ರಾವ್ ಶುಭಕೋರಿದರು. ಮುಕುಂದ ವೆಂಕಟಾಚಾರ್ ಧನ್ಯವಾದ ಸಲ್ಲಿಸಿದರು. ರಕ್ಷಿತಾ ರಾವ್ ಮತ್ತು ಸವಿತಾ ಕಾರ್ಯಕ್ರಮ ನಿರೂಪಿಸಿದರು ಎಮದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.