ಮಂಗಳೂರು: ಬೆಂಗಳೂರಿನ ಕ್ವಾಲಿಟಿ ಸರ್ಕಲ್ ಫೋರಂ ಆಫ್ ಇಂಡಿಯಾ (ಕ್ಯುಸಿಎಫ್‌ಐ) ನೇತೃತ್ವದಲ್ಲಿ ‘ಉತ್ತಮ ಭವಿಷ್ಯಕ್ಕಾಗಿ ಗುಣಮಟ್ಟದ ಪರಿಕಲ್ಪನೆ’ ಎಂಬ ಈರ್ಷಿಕೆಯಡಿ ಆಯೋಜಿಸಲಾಗಿದ್ದ 32ನೇ ವರ್ಷದ ಸಮ್ಮೇಳನದಲ್ಲಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೂರು ಚಿನ್ನದ ಪದಕಗಳು ಲಭಿಸಿವೆ.
ಗುಣಮಟ್ಟ ಕಾಪಾಡುವುದು ಸೇರಿದಂತೆ ವಿವಿಧ ವಿಭಾಗಗಳಲ್ಲಿ 490ಕ್ಕೂ ಹೆಚ್ಚು ತಂಡಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದವು. ಮಂಗಳೂರು ವಿಮಾನ ನಿಲ್ದಾಣದ ಒಟ್ಟು ಮೂರು ತಂಡಗಳು ಸ್ಪರ್ಧೆಯಲ್ಲಿದ್ದವು. ಈ ಮೂರೂ ತಂಡಗಳು ತಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆಗಾಗಿ ಚಿನ್ನದ ಪದಕ ಪಡೆದಿರುವುದು ಹೆಮ್ಮೆ ತಂದಿದೆ ಎಂದು ಮಂಗಳೂರು ಅಂತರರಾಷ್ಟ್ರೀಯ ವೊಮಾನ ನಿಲ್ದಾಣದ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.