ಮುಡಿಪು: ಬೋಳಿಯಾರು ಸುತ್ತಮುತ್ತಲಿನ 8 ಜಮಾಅತ್ಗಳ ಸಹಭಾಗಿತ್ವದಲ್ಲಿ ಮಾದಕವಸ್ತು ಮುಕ್ತ ಪರಿಸರದ ಗುರಿಯೊಂದಿಗೆ ರಚನೆಯಾಗಿರುವ ಬೋಳಿಯಾರು ಸಂಯುಕ್ತ ಜಮಾಅತ್ ಒಕ್ಕೂಟದ ಉದ್ಘಾಟನೆ ಹಾಗೂ ಪದಗ್ರಹಣ ಬೋಳಿಯಾರಿನಲ್ಲಿ ಭಾನುವಾರ ನಡೆಯಿತು.
ಅಮ್ಮೆಂಬಳ ಕೇಂದ್ರ ಜುಮಾ ಮಸೀದಿ ಖತೀಬ್ ಅಸ್ಸಯ್ಯದ್ ಅಮೀರ್ ಅಸ್ಸಖಾಫ್ ತಂಙಲ್ ಅವರ ನೇತೃತ್ವದಲ್ಲಿ ಮೌಲಿದ್ ಮಜ್ಲಿಸ್ ನಡೆಯಿತು.
ಒಕ್ಕೂಟದ ನೂತನ ಲೋಗೊ ಬಿಡುಗಡೆ ಮಾಡಲಾಯಿತು.
ಬೋಳಿಯಾರ್ನ ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ರಿಯಾಝ್ ಅಬೂಬಕ್ಕರ್ ರಿಹ್ಮಾನಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಸುಬ್ಬಗುಳಿ ಜಮಾಅತ್ ಖತೀಬ್ ಮೊಹಮ್ಮದ್ ಸೈಫುಲ್ಲಾ ಸಹದಿ ಅಲ್ ಅಫ್ಲಲಿ ಹಾಗೂ ಕುಕ್ಕೋಟು ಜುಮಾ ಮಸೀದಿ ಖತೀಬ ನಾಸಿರ್ ಅಝ್ಹರಿ ಅಲ್ ಮುರ್ಶಿದಿ ಅವರು ಮಾತನಾಡಿದರು.
ಖತೀಬರಾದ ಅಬ್ದುರ್ರಹ್ಮಾನ್ ಮದನಿ ಮಧ್ಯನಡ್ಕ, ಅನ್ವರ್ ಮರ್ಝೂಖ್ ಅಸ್ಸಖಾಫಿ ಪಾನೇಲ, ಮುಹಮ್ಮದ್ ಅಲಿ ಅರ್ಷದಿ ರಂತಡ್ಕ, ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಬಾಕಿಮಾರ್, ಅಬೂಬಕ್ಕರ್ ಕೋಟೆ, ಮುಹಮ್ಮದ್ ಪಲ್ಲ, ಮುಹಮ್ಮದ್ ರಂತಡ್ಕ, ಉಬೈದ್ ಅಮ್ಮೆಂಬಳ, ಅಬೂಬಕ್ಕರ್ ಮಧ್ಯನಡ್ಕ, ಸಂಯುಕ್ತ ಜಮಾಅತ್ ಅಧ್ಯಕ್ಷ ಶರೀಫ್ ಕಾಪಿಕಾಡ್, ಉಪಾಧ್ಯಕ್ಷ ರಝಾಕ್ ಬಂಡಸಾಲೆ, ಕೋಶಾಧಿಕಾರಿ ನಿಯಾಝ್ ಎಂ.ಕೆ., ಸಂಘಟನಾ ಕಾರ್ಯದರ್ಶಿಗಳಾದ ಕಬೀರ್ ರಂತಡ್ಕ, ಸಿ.ಎ.ಅಬ್ದುಲ್ ಖಾದರ್, ಜತೆ ಕಾರ್ಯದರ್ಶಿಗಳಾದ ಇಸಾಕ್ ಮಧ್ಯನಡ್ಕ, ಜಾಫರ್ ಪಾನೇಲ ಭಾಗವಹಿಸಿದ್ದರು.
ಕಾರ್ಯಕ್ರಮ ಆಯೋಜನಾ ಸಮಿತಿ ಸಹ ಸಂಚಾಲಕ ಎಂ.ಎಸ್.ಯೂಸುಫ್ ಸ್ವಾಗತಿಸಿದರು. ಒಕ್ಕೂಟದ ಕಾರ್ಯದರ್ಶಿ ಹಮೀದ್ ಒಡಕಿನಕಟ್ಟೆ
ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.