ಸುಳ್ಯ (ದಕ್ಷಿಣ ಕನ್ನಡ): ಆನೆಗಳ ಗುಂಪುನಿಂದ ಬೇರ್ಪಟ್ಟು ತಾಲ್ಲೂಕಿನ ಮಂಡೆಕೋಲು ಜನವಸತಿ ಪ್ರದೇಶದಲ್ಲಿ ಒಂಟಿಯಾಗಿ ಉಳಿದುಕೊಂಡಿದ್ದ ಮರಿಯೊಂದನ್ನು ಗ್ರಾಮಸ್ಥರು ಕಟ್ಟಿ ಹಾಕಿದ್ದಾರೆ.
ಶುಕ್ರವಾರ ಬೆಳಿಗ್ಗೆ ಈ ಮರಿ ಆನೆ ಮಂಡೆಕೋಲಿನ ಕನ್ಯಾನ ಎಂಬಲ್ಲಿ ಇರುವುದು ಪತ್ತೆಯಾಗಿದೆ. ರಾತ್ರಿ ವೇಳೆ ತೋಟಗಳಿಗೆ ಲಗ್ಗೆ ಇಟ್ಟ ಕಾಡಾನೆಗಳ ಗುಂಪಿನಿಂದ ಇದು ತಪ್ಪಿಸಿಕೊಂಡು ಬೇರ್ಪಟ್ಟಿರಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಮರಿ ಆನೆಯನ್ನು ಆನೆಗಳ ಗುಂಪಿನೊಂದಿಗೆ ಸೇರಿಸಲು ಅರಣ್ಯ ಇಲಾಖೆಯವರು ಮುಂದಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.