ಬಂಟ್ವಾಳ: ತುಳುನಾಡಿನಲ್ಲಿ ಆಷಾಢ ತಿಂಗಳ ಔಷಧೀಯ ಆಹಾರ ಪದ್ಧತಿ ಮತ್ತು ಕೃಷಿಕರ ಜೀವನ ಮೌಲ್ಯ ತಿಳಿಸುವ ಸಂದೇಶ ಯುವ ಜನತೆಗೆ ತಿಳಿಸಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಇಲ್ಲಿನ ಬೆಳ್ಳೂರು ವಲಯ ಬಂಟರ ಸಂಘದ ವತಿಯಿಂದ ಕಾವೇಶ್ವರ ದೇವಸ್ಥಾನ ಬಳಿ ಭಾನುವಾರ ಏರ್ಪಡಿಸಿದ್ದ ಆಟಿದ ಕೂಟ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಸಂಘದ ಗೌರವಾಧ್ಯಕ್ಷ ರಘುನಾಥ ಪಯ್ಯಡೆ ಉದ್ಘಾಟಿಸಿದರು. ಉಪನ್ಯಾಸಕ ಅಶ್ವಿನ್ ಶೆಟ್ಟಿ ಬೊಂಡಂತಿಲಗುತ್ತು ಆಟಿ ಆಚರಣೆ ಪದ್ಧತಿ ಬಗ್ಗೆ ಮಾಹಿತಿ ನೀಡಿದರು. ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ತಾಲ್ಲೂಕು ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಶುಭ ಹಾರೈಸಿದರು
ಇದೇ ವೇಳೆ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪ್ರಮುಖರಾದ ಸಂತೋಷ್ ಶೆಟ್ಟಿ ಮುಂಬೈ, ಜಗನ್ನಾಥ ಚೌಟ ಬದಿಗುಡ್ಡೆ, ರಂಜನ್ ಕುಮಾರ್ ಶೆಟ್ಟಿ ಅರಳ, ಕೆ.ಧನಂಜಯ ರೈ, ರಮಾ ಭಂಡಾರಿ, ಮಿಲಾನ್ ಆಳ್ವ, ಪ್ರಕಾಶ್ ಆಳ್ವ, ಮಲ್ಲಿಕಾ ಶೆಟ್ಟಿ ಅಮ್ಟಾಡಿ, ಸುಕೇಶ ಚೌಟ, ಚಂದ್ರಹಾಸ ಶೆಟ್ಟಿ ನಾರ್ಲ, ಚರಣ್ ಆಳ್ವ, ಪ್ರದೀಪ್ ಶೆಟ್ಟಿ, ರತ್ನಾಕರ ಶೆಟ್ಟಿ, ಸದಾಶಿವ ಶೆಟ್ಟಿ, ಕೃಷ್ಣಪ್ರಸಾದ್ ರೈ, ಡಾ.ರಾಜೇಶ ಶೆಟ್ಟಿ, ರಾಧಾಕೃಷ್ಣ ಆಳ್ವ, ಉಮೇಶ ಶೆಟ್ಟಿ ದೇವಸ್ಯ ಇದ್ದರು. ಸಂಘದ ಕಾರ್ಯದರ್ಶಿ ನರೇಶ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಕಿಶೋರ್ ಭಂಡಾರಿ ವಂದಿಸಿದರು. ಪ್ರಶಾಂತ್ ಬಿ.ಶೆಟ್ಟಿ ಶಿರ್ವ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.