ADVERTISEMENT

ಭಯ ಬೇಡ; ಆತ್ಮಸ್ಥೈರ್ಯ ಇರಲಿ

ಬಂಟ್ವಾಳ: ಕೋವಿಡ್‌–19ನಿಂದ ಗುಣಮುಖರಾದ ಹಿರಿಯ ರಾಜಕಾರಣಿ ಪೂಜಾರಿ ಸಲಹೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 15:01 IST
Last Updated 20 ಜುಲೈ 2020, 15:01 IST
ಬಿ.ಜನಾರ್ದನ ಪೂಜಾರಿ
ಬಿ.ಜನಾರ್ದನ ಪೂಜಾರಿ   

ಬಂಟ್ವಾಳ: ‘ಕೋವಿಡ್‌–19 ಸೋಂಕಿನ ವಿರುದ್ಧ ಗೆಲ್ಲಲು ನಮ್ಮಲ್ಲಿ ಆತ್ಮಸ್ಥೈರ್ಯ ಇರಬೇಕು. ಯಾವುದಕ್ಕೂ ಭಯಬೀಳಬಾರದು’ ಎಂದು ಕೇಂದ್ರದ ಮಾಜಿ ಸಚಿವ, ಹಿರಿಯ ರಾಜಕಾರಣಿ ಬಿ.ಜನಾರ್ದನ ಪೂಜಾರಿ ತಿಳಿಸಿದ್ದಾರೆ.

ಜುಲೈ 4ರಂದು ಅವರಿಗೆ ಜ್ವರ ಕಾಣಿಸಿಕೊಂಡ ಬಳಿಕ ಗಂಟಲ ದ್ರವ ಮಾದರಿಯನ್ನು ಪರೀಕ್ಷಿಸಲಾಗಿ ಅವರಿಗೆ ಕೋವಿಡ್‌–19 ಸೋಂಕು ಬಾಧಿಸಿರುವುದು ದೃಢಪಟ್ಟಿತ್ತು. ಬಳಿಕ ಅವರು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಇದೀಗ ಸೋಂಕಿತ ಪತ್ನಿ ಮತ್ತು ಸೊಸೆ ಸಹಿತ ಎಲ್ಲರೂ ಗುಣಮುಖರಾಗಿ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡು ಬಂಟ್ವಾಳದಲ್ಲಿರುವ ಮನೆಗೆ ಬಂದಿದ್ದಾರೆ.

ADVERTISEMENT

‘ಶೀಘ್ರ ಗುಣಮುಖರಾಗಿ ಮನೆಗೆ ಬರುವಂತೆ ಅನೇಕರು ದೇವರಿಗೆ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದ್ದಾರೆ. ಅದೇ ರೀತಿ, ಯಶಸ್ವಿಯಾಗಿ ಚಿಕಿತ್ಸೆ ನೀಡಿದ ವೈದ್ಯರು, ದಾದಿಯರು ಹಾಗೂ ಕೋವಿಡ್ ವಾರಿಯರ್ಸ್‌ಗಳಿಗೆ ನಾನು ಮನಃಪೂರ್ವಕವಾಗಿ ಕೃತಘ್ನತೆ ಸಲ್ಲಿಸುತ್ತೇನೆ’ ಎಂದು ತಿಳಿಸಿದ್ದಾರೆ.

‘ಕೊರೊನಾ ವೈರಸ್‌ ಬಗ್ಗೆ ಭಯ ಬೇಡ. ಪ್ರತಿಯೊಬ್ಬರೂ ಆತ್ಮಸ್ಥೈರ್ಯ ಬೆಳೆಸಿಕೊಳ್ಳುವುದರ ಜೊತೆಗೆ ಕಷಾಯ ಮತ್ತಿತರ ಬಿಸಿ ಪಾನೀಯ ಸೇವಿಸಿ’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.