ADVERTISEMENT

ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ನಿಧನ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 2:46 IST
Last Updated 21 ಅಕ್ಟೋಬರ್ 2024, 2:46 IST
<div class="paragraphs"><p>ಜಯರಾಮ ಆಚಾರ್ಯ</p></div>

ಜಯರಾಮ ಆಚಾರ್ಯ

   

ಮಂಗಳೂರು: ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದರಾದ ಬಂಟ್ವಾಳ ಜಯರಾಮ ಆಚಾರ್ಯ ಅವರು ಬೆಂಗಳೂರಿನಲ್ಲಿ ಸೋಮವಾರ ನಿಧನರಾದರು.

ತೆಂಕುತಿಟ್ಟು ಯಕ್ಷಗಾನದಲ್ಲಿ ಅಗ್ರಗಣ್ಯ ಪಾರಂಪರಿಕ ಹಾಸ್ಯಗಾರರಾಗಿ ಅವರು ಪ್ರಸಿದ್ಧರು.

ADVERTISEMENT

ಅವರು ಪುತ್ತೂರು ಪ್ರವಾಸಿ ಮೇಳದ ತಿರುಗಾಟಕ್ಕೆಂದು ಮೇಳದವರ ಜೊತೆ ಬೆಂಗಳೂರಿಗೆ ತೆರಳಿದ್ದರು. ಕಳೆದ ತಿರುಗಾಟದ ತನಕ ಹನುಮಗಿರಿ ಮೇಳದ ಕಲಾವಿದರಾಗಿದ್ದರು.

ಅವರಿಗೆ ಪತ್ನಿ ಶ್ಯಾಮಲ, ಇಬ್ಬರು ಮಕ್ಕಳು (ವರ್ಷಾ ಮತ್ತು ವರುಣ್ ) ಹಾಗೂ ಭಾರಿ ಸಂಖ್ಯೆಯ ಅಭಿಮಾನಿಗಳು ಇದ್ದಾರೆ.

ಸೋಮವಾರ ಮಧ್ಯಾಹ್ನ 2-30 ಗಂಟೆಗೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಬಂಟ್ವಾಳ ಬೈಪಾಸ್ ರಸ್ತೆ ಬಳಿಯ ಅವರ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.