ಮಂಗಳೂರು: ತಾಲ್ಲೂಕಿನ ಇನೋಳಿಯಲ್ಲಿರುವ ಬ್ಯಾರೀಸ್ ತಾಂತ್ರಿಕ ಸಂಸ್ಥೆ (ಬಿಐಟಿ) ಮತ್ತು ಬ್ಯಾರೀಸ್ ಎನ್ವಿರೊ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್‌ನ (ಬೀಡ್ಸ್) ಪದವಿ ಪ್ರದಾನ ಸಮಾರಂಭ ಶನಿವಾರ (ಡಿ.16) ನಡೆಯಲಿದೆ ಎಂದು ಬಿಟ್ ಪ್ರಾಂಶುಪಾಲ ಮಂಜುರ್ ಬಾಷಾ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಟ್‌ಗೆ ಸಂಬಂಧಿಸಿದ 11ನೇ ಮತ್ತು ಬೀಡ್ಸ್‌ನ ನಾಲ್ಕನೇ ಪದವಿ ಪ್ರದಾನ ಸಮಾರಂಭ ಇದಾಗಿದ್ದು ಬ್ಯಾರೀಸ್ ನಾಲೆಜ್ ಕ್ಯಾಂಪಸ್‌ನಲ್ಲಿ ಬೆಳಿಗ್ಗೆ 9.30ಕ್ಕೆ ಆಯೋಜಿಸಿರುವ ಕಾರ್ಯಕ್ರಮದ ಕಣ್ಣೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಎಂ. ಅಬ್ದುಲ್ ರಹಿಮಾನ್ ಉದ್ಘಾಟನೆ ಮಾಡುವರು ಎಂದು ತಿಳಿಸಿದರು.
ಬ್ಯಾರೀಸ್ ಅಕಾಡೆಮಿ ಆಫ್ ಲರ್ನಿಂಗ್‌ನ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ವ್ಯಕ್ತಿತ್ವ ವಿಕಸನ ತರಬೇತುದಾರ ಸಂಪತ್ ಜೆ.ಎಂ ಅವರು ದಿಕ್ಸೂಚಿ ಭಾಷಣ ಮಾಡುವರು. ಮಂಗಳೂರು ವಿವಿ ಕುಲಪತಿ ಜಯರಾಜ್ ಅಮೀನ್ ಸಂದೇಶ ನೀಡುವರು. ಉದ್ಯಮಿಗಳಾದ ಸಂದೀಪ್ ಜಗದೀಶ್ ಹಾಗೂ ರಿಜ್ಮಾ ಬಾನು ಉಪನ್ಯಾಸ ನೀಡುವರು. ಸೋನಿ ಲಿವ್ ಆಯೋಜಿಸಿದ್ದ ಮಾಸ್ಟರ್ ಚೆಫ್ ಸ್ಪರ್ಧೆಯ ವಿಜೇತ ಮೊಹಮ್ಮದ್ ಆಶಿಕ್ ಅವರನ್ನು ಸನ್ಮಾನಿಸಲಾಗುವುದು ಎಂದು ಅಬ್ದುಲ್ ರಹಿಮಾನ್ ತಿಳಿಸಿದರು.
ಪದವಿಪೂರ್ವ ವಿಭಾಗದಲ್ಲಿ ಸಿವಿಲ್, ಮೆಕ್ಯಾನಿಕಲ್, ಸಿಎಸ್‌ಇ, ಇಸಿಇ, ವಾಸ್ತುಶಿಲ್ಪ ಶಾಖೆ, ಡಿಪ್ಲೋಮಾ, ಸಿವಿಲ್ ಮತ್ತು ಮೆಕಾನಿಕಲ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಅತ್ಯುತ್ತಮ ಸಾಧನೆ ಮಾಡಿದವರನ್ನು ಗೌರವಿಸಲಾಗುವುದು ಎಂದು ಅವರು ವಿವರಿಸಿದರು.
ಬೀಡ್ಸ್ ವಿಭಾಗದ ಪ್ರಾಚಾರ್ಯ ಖಲೀಲ್ ರಜಾಕ್, ಬಿಟ್ ಪಾಲಿಟೆಕ್ನಿಕ್‌ನ ನಿರ್ದೇಶಕ ಪೃಥ್ವಿರಾಜ್ ಮತ್ತು ಅಬ್ದುಲ್ಲ ಗುಬ್ಬಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.