ಕಾಸರಗೋಡು: ಬೇಕಲ ಅಂತಾರಾಷ್ಟ್ರೀಯ ಕಡಲ ಕಿನಾರೋತ್ಸವ ಅಂಗವಾಗಿ ಮಣ್ಣಿನಲ್ಲಿ ಮತ್ತು ಮಳಲಿನಲ್ಲಿ ನಿರ್ಮಿಸಲಾದ ಕಲಾಕೃತಿಗಳು ನೋಡುಗರ ಗಮನ ಸೆಳೆಯುತ್ತಿವೆ.
ಜಗಮುಖ, ಹೆಣ್ಣು, ಮತ್ಸ್ಯ ಕನ್ಯೆ, ಕಥಕಳಿ ಸಹಿತ ಕೃತಿಗಳು ಪ್ರವಾಸಿಗರ ಮನ ಸೆಳೆಯುತ್ತವೆ. ಕಡಲ ಕಿನಾರೆಯ ವಿವಿಧೆಡೆ ಈ ಶಿಲ್ಪಗಳನ್ನು ಇರಿಸಲಾಗಿದೆ. ಕಿನಾರೆಯಲ್ಲಿ ನೀರು ಮತ್ತು ಮರಳು ಮಾತ್ರ ಬಳಸಿ ಕಲಾಕೃತಿಗಳನ್ನು ರಚಿಸಲಾಗಿದೆ.
ಮರಳುಶಿಲ್ಪ ಕಲಾವಿದರಾದ ಸಜೀವ್ ಸ್ವಾಮಿ, ವಾಸವನ್ ಪಯ್ಯಟ್ಟಂ, ಟಿನು, ರಮೇಶ್ ನಡುವಿಲ್, ರಿನು ಫಿಲಿಪ್, ನಿಧೀಶ್ ಪ್ರಭಾಕರ್, ರವೀನಾ, ಸ್ವಾತಿ, ರಶ್ಮಿ, ಶ್ರೀಲಕ್ಷ್ಮಿ ಮುಂತಾದ ಕಲಾವಿದರು ಕಲಾಕೃತಿಗಳಿಗೆ ಜೀವ ತುಂಬಿದ್ದಾರೆ.
ಕಡಲ ಕಿನಾರೆಯಲ್ಲಿ ಕಲಾವಿದರು ರಚಿಸಿದ ಕಲಾಕೃತಿಗಳನ್ನು ಆಸ್ವಾದಿಸುತ್ತಿದ್ದ ಒಡಿಶಾ ಮೂಲದ ಸೋನು ಎಂಬುವರು ತಾವೂ ಈ ರಚನೆಯಲ್ಲಿ ಭಾಗಿಯಾಗುವ ಉತ್ಸಾಹ ತೋರಿದ್ದರು. ಕೇರಳದ ಪ್ರಧಾನ ಕಲೆಯಾಗಿರುವ ಕಥಕ್ಕಳಿಯ ರೂಪವನ್ನು ಸೋನು ಅವರು ಮಣ್ಣಿನಲ್ಲಿ ರಚಿಸಿ ಎಲ್ಲರ ಮನಗೆದ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.