ADVERTISEMENT

ಬೆಳ್ತಂಗಡಿ: ಶಿಶಿಲ ಕಪಿಲ ನದಿಯಲ್ಲಿ ಉಕ್ಕಿ ಹರಿದ ಪ್ರವಾಹ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 15:18 IST
Last Updated 18 ಜುಲೈ 2024, 15:18 IST
ದೇವಸ್ಥಾನದ ಅಂಗಣಕ್ಕೆ ನುಗ್ಗಿದ ನದಿ ನೀರು
ದೇವಸ್ಥಾನದ ಅಂಗಣಕ್ಕೆ ನುಗ್ಗಿದ ನದಿ ನೀರು   

ಬೆಳ್ತಂಗಡಿ: ಮತ್ಯತೀರ್ಥ ಎಂದೇ ಪ್ರಸಿದ್ಧವಾದ ಶಿಶಿಲ ಶಿಶಿಲೇಶ್ವರ ದೇವಸ್ಥಾನದ ಸಮೀಪ ಹರಿಯುತ್ತಿರುವ ಕಪಿಲಾ ನದಿಯಲ್ಲಿ ಗುರುವಾರ ಸಂಜೆಯಿಂದ ಪ್ರವಾಹ ಏರಿಕೆಯಾಗುತ್ತಿದ್ದು, ನೀರು ದೇವಸ್ಥಾನದ ಒಳಗೆ ನೀರು ನುಗ್ಗಿದೆ.

ಗುರುವಾರ ಮಧ್ಯಾಹ್ನದ ನಂತರ ನದಿಯಲ್ಲಿ ಪ್ರವಾಹ ಏರಿಕೆ ಆಗಿದ್ದು, ನೀರು ದೇವಸ್ಥಾನದ ಅಂಗಳಕ್ಕೆ ಬಂದಿದೆ. ಬೈರಾಪುರ ಘಾಟಿಯಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕಪಿಲಾ ನದಿಯಲ್ಲಿ ಪ್ರವಾಹ ಉಕ್ಕಿ ಹರಿಯಲಾರಂಭಿಸಿದೆ. ಪ್ರವಾಹದ ಜತೆಗೆ ಭಾರಿ ಗಾತ್ರದ ಮರಗಳೂ ಬರುತ್ತಿದ್ದು, ಶಿಶಿಲದ ಕಿಂಡಿ ಅಣೆಕಟ್ಟೆಯಲ್ಲಿ ಸಿಕ್ಕಿಹಾಕಿಕೊಂಡಿವೆ. ಇದರಿಂದಾಗಿ ಪ್ರವಾಹ ಹರಿಯಲು ಅಡ್ಡಿಯಾಗಿ ನೀರು ಏರುತ್ತಿದೆ. ಈ ವರ್ಷ ಪ್ರಥಮ ಬಾರಿಗೆ ನೀರು ದೇವಸ್ಥಾನದ ಒಳಗೆ ನುಗ್ಗಿದೆ.

ದೇವಸ್ಥಾನದ ಪರಿಸರದಲ್ಲಿ ಹಲವು ಮನೆಗಳಿದ್ದು, ದೇವಸ್ಥಾನದ ಅಂಗಳದವರೆಗೆ ನೀರು ಬಂದಿರುವುದರಿಂದ ಅವರು ಭಯಗೊಂಡಿದ್ದಾರೆ. ಪ್ರವಾಹದಲ್ಲಿ ಇನ್ನಷ್ಟು ಮರಗಳು ಬಂದು ಕಿಂಡಿ ಅಣೆಕಟ್ಟೆಯಲ್ಲಿ ಸಿಲುಕಿಕೊಂಡರೆ ಪ್ರವಾಹ ಮತ್ತಷ್ಟು ಏರುವ ಸಾಧ್ಯತೆಯಿದೆ. ಶಿಶಿಲ ಪೇಟೆಗೆ ಬಂದವರು ಇದೀಗ ಕಿಂಡಿಅಣೆಕಟ್ಟು ಮುಳುಗಿರುವುದರಿಂದ ನದಿ ದಾಟಲು ಸಂಕಷ್ಟ ಅನುಭವಿಸುವಂತಾಗಿದೆ. ಕೊಳಕೆ ಬೈಲು ಪ್ರದೇಶದವರು ದೂರದ ದಾರಿ ಮೂಲಕ ಮನೆಗಳಿಗೆ ತೆರಳಬೇಕಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.