ADVERTISEMENT

ರಾಹುಲ್ ಗಾಂಧಿ ಕೆನ್ನೆಗೆ ಬಾರಿಸಿದರೆ ಒಳ್ಳೆಯದಿತ್ತು: ಶಾಸಕ ಭರತ್‌ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 6:25 IST
Last Updated 9 ಜುಲೈ 2024, 6:25 IST

ಮಂಗಳೂರು: ‘ಹಿಂದೂಗಳನ್ನು ಕೆಟ್ಟವರೆಂದು ಬಿಂಬಿಸಲು ಸಂಸತ್ತಿನಲ್ಲಿ ರಾಹುಲ್ ಗಾಂಧಿ ಆ ರೀತಿ ಮಾತನಾಡಿದ್ದಾನೆ. ಪಾರ್ಲಿಮೆಂಟ್‌ ಒಳಗೆ ಹೋಗಿ ಯಾರಾದರೂ ಆತನ ಕೆನ್ನೆಗೆ ಎರಡು ಬಾರಿಸಿದರೆ ಒಳ್ಳೆಯದಿತ್ತು. ಅವನಿಗೆ ಎರಡು ಕೊಟ್ಟರೆ ಸರಿಯಾಗುತ್ತಿತ್ತು’ ಎಂದು ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಡಾ.ವೈ.ಭರತ್ ಶೆಟ್ಟಿ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಹಿಂದೂಗಳ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲಾ ಘಟಕವು ಕಾವೂರಿನಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. 

‘ಕಾಂಗ್ರೆಸ್‌ನ ಹಿಂದೂಗಳು ರಾಜಕೀಯ ಮಾಡಲಿ. ಆದರೆ, ಇಂತಹ ಮಾತುಗಳನ್ನು ಆಡುವವರಿಗೆ ಪ್ರೋತ್ಸಾಹ ಕೊಡಬಾರದು’ ಎಂದರು. 

ADVERTISEMENT

‘ಶಸ್ತ್ರ ಹೇಗೆ ಉಪಯೋಗಿಸಬೇಕು ಎಂದು ಹಿಂದೂ ಸಮಾಜ ತಿಳಿದುಕೊಂಡಿದೆ. ನಾವು ಮಲಗುವುದು ಜಾಸ್ತಿ. ನಿದ್ದೆಯಲ್ಲಿರುವವರನ್ನು ಎಚ್ಚರಿಸುವ ಕೆಲಸವನ್ನು ಬಹುಶಃ ರಾಹುಲ್ ಗಾಂಧಿ ಮಾಡುತ್ತಿದ್ದಾನೆ’ ಎಂದರು. 

ಸಂಸದ ಕ್ಯಾ.ಬ್ರಿಜೇಶ್‌ ಚೌಟ, ಶಾಸಕ ಡಿ.ವೇದವ್ಯಾಸ ಕಾಮತ್‌ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.