ಮಂಗಳೂರು: ಮಿಲಾಗ್ರೀಸ್ ವಾರ್ಡಿನ ಮಿತ್ತಮುಗೇರ್ ಲಲಿತಾ ಕಾಂಪೌಂಡಿನ ನಿವಾಸಿ ಶಶಿಕಲಾ ಅವರ ಕುಟುಂಬವು ಆರ್ಥಿಕ ಸಂಕಷ್ಟದಲ್ಲಿದ್ದು, ಈ ವಾರ್ಡ್‌ನ ಬಿಜೆಪಿ ಕಾರ್ಯಕರ್ತರು ಅವರಿಗೊಂದು ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ಹೊಸ ಮನೆಯನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಮಂಗಳವಾರ ಹಸ್ತಾಂತರಿಸಿದರು.
‘ಶಶಿಕಲಾ ಅವರ ಕುಟುಂಬದ ಜಾಗದ ದಾಖಲೆಪತ್ರಗಳು ಸಮರ್ಪಕವಾಗಿಲ್ಲದ ಕಾರಣ ಅವರಿಗೆ ಸರ್ಕಾರದಿಂದ ಮನೆ ನಿರ್ಮಿಸಿಕೊಡಲು ಸಾಧ್ಯವಿರಲಿಲ್ಲ. ಈ ಕುಟುಂಬವು ಸಂಕಷ್ಟದಲ್ಲಿರುವುದನ್ನು ಅರಿತು ಕಾರ್ಯಕರ್ತರು ಸ್ಥಳೀಯ ಬಿಜೆಪಿ ಮುಖಂಡ ಮೋಹನ್ ಪೂಜಾರಿ ನೇತೃತ್ವದಲ್ಲಿ ₹ 4.5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿದ್ದಾರೆ’ ಎಂದು ವೇದವ್ಯಾಸ ಕಾಮತ್ ತಿಳಿಸಿದರು.
ಮಿಲಾಗ್ರೀಸ್ ವಾರ್ಡಿನ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ ಕಾಮತ್, ‘ಪ್ರಧಾನಿ ನರೇಂದ್ರ ಮೋದಿ ಅವರು ಸೇವೆಯೇ ಸಂಘಟನೆ ಎಂದು ಹೇಳಿದ್ದಾರೆ. ಈ ಮಾತನ್ನು ಪಕ್ಷದ ಕಾರ್ಯಕರ್ತರು ಕಾರ್ಯರೂಪಕ್ಕೆ ಇಳಿಸಿದ್ದಾರೆ.ಪಂಡಿತ್ ದೀನದಯಾಳ್ ಉಪಾಧ್ಯಾಯರ ಅಂತ್ಯೋದಯ ಪರಿಕಲ್ಪನೆಗೂ ಇದು ಪೂರಕ’ ಎಂದರು.
ಉಪಮೇಯರ್ ಪೂರ್ಣಿಮಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಕೀಲಾ ಕಾವ, ಕಿಶೋರ್ ಕೊಟ್ಟಾರಿ, ಪಾಲಿಕೆ ಸದಸ್ಯರಾದ ಭರತ್ ಕುಮಾರ್ ಎಸ್, ರೇವತಿ ಶೆಟ್ಟಿ, ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು, ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ರೂಪಾ ಡಿ. ಬಂಗೇರಾ, ಸುರೇಂದ್ರ ಜೆ., ದೀಪಕ್ ಪೈ, ರಮೇಶ್ ಹೆಗ್ಡೆ, ಅಜಯ್ ಕುಲಶೇಖರ, ಮೋಹನ್ ಕೆ. ಪೂಜಾರಿ, ಮೀರಾ ಕರ್ಕೇರಾ, ಅಜಿತ್ ಡಿಸಿಲ್ವ, ಉಮನಾಥ್ ಬೋಳಾರ್, ನಿಲೇಶ್ ಕಾಮತ್, ರಘುವೀರ್ ಬಾಬುಗುಡ್ಡ, ಲಲೇಶ್ ಕುಮಾರ್, ಅಶ್ವಿತ್ ಕೊಟ್ಟಾರಿ, ಅನಿಲ್ ಕುಮಾರ್ ಹೊಯಿಗೆ ಬಜಾರ್, ಫೆಡ್ರಿಕ್ ಪೌಲ್, ರೂಪಾ ಕೆ.ಎಸ್, ಮಾಲತಿ ಶೆಟ್ಟಿ, ಮಂಜುನಾಥ್, ಶಬರೀಶ್ ಎಂ. ಎಸ್, ಘನಶ್ಯಾಮ ಆಚಾರ್ಯ, ಗುರು ರಾಜೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.