ADVERTISEMENT

ತಿರುವೈಲುಗುತ್ತು ಕಂಬಳ: ಬೋಳಾರದ ಕೋಣಗಳಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 4:59 IST
Last Updated 20 ಫೆಬ್ರುವರಿ 2024, 4:59 IST

ಮಂಗಳೂರು: ಬೋಳಾರದ ತ್ರಿಶಾಲ್ ಕೆ.ಪೂಜಾರಿ ಅವರ ಕೋಣಗಳು ವಾಮಂಜೂರು ತಿರುವೈಲುಗುತ್ತು ‘ಸಂಕುಪೂಂಜ-ದೇವುಪೂಂಜ’ ಜೋಡುಕರೆ ಕಂಬಳದಲ್ಲಿ ಕನೆಹಲಗೆ ಮತ್ತು ಅಡ್ಡಹಲಗೆ ವಿಭಾಗದ ಪ್ರಶಸ್ತಿ ಗೆದ್ದುಕೊಂಡವು.

ಕನೆಹಲಗೆಯಲ್ಲಿ ತ್ರಿಶಾಲ್ ಪೂಜಾರಿ ಅವರ ಕೋಣಗಳನ್ನು ಓಡಿಸಿದ ಬೈಂದೂರು ಮಹೇಶ್ ಪೂಜಾರಿ ಹಲಗೆ ಮುಟ್ಟಿದರೆ, ಅಡ್ಡಹಲಗೆಯಲ್ಲಿ ಸಾವ್ಯ ಗಂಗಯ್ಯ ಪೂಜಾರಿ ಹಲಗೆ ಮುಟ್ಟಿದರು.

ಕನೆಹಲಗೆ ವಿಭಾಗದಲ್ಲಿ ವಾಮಂಜೂರು ತಿರುವೈಲುಗುತ್ತು ನವೀನ್‌ಚಂದ್ರ ಆಳ್ವ ಅವರ ‘ಬಿ’ ಕೋಣಗಳು ದ್ವಿತೀಯ ಸ್ಥಾನ ಗಳಿಸಿದವು. ತೆಕ್ಕಟ್ಟೆ ಸುಧೀರ್ ದೇವಾಡಿಗ ಹಲಗೆ ಮುಟ್ಟಿದರು. ಅಡ್ಡ ಹಲಗೆಯಲ್ಲಿ ನಾರಾವಿ ಯುವರಾಜ್ ಜೈನ್ ಅವರ ಕೋಣಗಳಿಗೆ ದ್ವಿತೀಯ ಸ್ಥಾನ ಲಭಿಸಿತು. ಹಲಗೆ ಮುಟ್ಟಿದವರು ಭಟ್ಕಳ ಹರೀಶ್.

ADVERTISEMENT

ಇತರ ಫಲಿತಾಂಶಗಳು: ಹಗ್ಗ ಹಿರಿಯ: ನಂದಳಿಕೆ ಶ್ರೀಕಾಂತ್ ಭಟ್ ಅವರ ‘ಎ’ ಕೋಣಗಳು–1 (ಓಡಿಸಿದವರು: ಕಾವೂರು ದೋಟ ಸುದರ್ಶನ್), ಹರೇಕಳ ಕೈಡೇಲುಗುತ್ತು ಮಿಥುನ್ ಎಂ ರೈ ಅವರ ‘ಎ’ ಕೋಣಗಳು–2 (ಓಡಿಸಿದವರು: ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ); ಹಗ್ಗ ಕಿರಿಯ: ಕಾರ್ಕಳ ನೆಕ್ಲಾಜೆಗುತ್ತು ಪ್ರವೀಣ್ ಪ್ರದೀಪ್ ಕೋಟ್ಯಾನ್ ಅವರ ‘ಎ’ ಕೋಣಗಳು–1 (ಓಡಿಸಿದವರು: ಬೈಂದೂರು ಮಂಜುನಾಥ ಗೌಡ), ಪ್ರವೀಣ್ ಪ್ರದೀಪ್ ಕೋಟ್ಯಾನ್ ಅವರ ‘ಬಿ’ ಕೋಣಗಳು–2 (ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ); ನೇಗಿಲು ಹಿರಿಯ: ಮಿಜಾರು ಬರ್ಕೆ ಪ್ರವೀಣ್ ಭಂಡಾರಿ ಅವರ ಕೋಣಗಳು–1 (ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ), ನಾವುಂದ ಆಶ್ರಿತ ಇಶಾನಿ ವಿಶ್ವನಾಥ ಪೂಜಾರಿ ಅವರ ‘ಎ’ ಕೋಣಗಳು–2 (ಓಡಿಸಿದವರು: ಬೈಂದೂರು ಮಂಜುನಾಥ ಗೌಡ); ನೇಗಿಲು ಕಿರಿಯ: ವಾಮಂಜೂರು ತಿರುವೈಲು ಮಜಲುಮನೆ ಸಂಜೀವ ಮೂಲ್ಯ ಅವರ ‘ಎ’ ಕೋಣಗಳು–1 (ಓಡಿಸಿದವರು: ಹೀರೇಬೆಟ್ಟು ಹರ್ಷಿತ್), ನೆಲ್ಲಿಕಾರು ಸ್ವಸ್ತಿಕ್ ಯುವ ಬಾಂಧವರ ‘ಎ’ ಕೋಣಗಳು–2 (ಓಡಿಸಿದವರು: ಕಕ್ಕೆಪದವು ಗೌತಮ್ ಗೌಡ).

ಕನೆಹಲಗೆ ವಿಭಾಗದಲ್ಲಿ 6 ಜೊತೆ, ಅಡ್ಡಹಲಗೆ ವಿಭಾಗದಲ್ಲಿ 5 ಜೊತೆ, ಹಗ್ಗ ಹಿರಿಯ 14 ಜೊತೆ, ನೇಗಿಲು ಹಿರಿಯ 35 ಜೊತೆ, ಹಗ್ಗ ಕಿರಿಯ 23 ಜೊತೆ, ನೇಗಿಲು ಕಿರಿಯ 83 ಜೊತೆ ಕೋಣಗಳು ಪಾಲ್ಗೊಂಡಿದ್ದವು ಎಂದು ಜಿಲ್ಲಾ ಕಂಬಳ ಸಮಿತಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.