ಉಪ್ಪಿನಂಗಡಿ: ಕೊಯಿಲ ಗ್ರಾಮದ ಆತೂರು ಸದಾಶಿವ ದೇವಸ್ಥಾನದಲ್ಲಿ ಶನಿವಾರ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ವಿವಿಧ ವೈದಿಕ ಕಾರ್ಯಕ್ರಮ ನಡೆಯಿತು.
ನಾಗೇಶ್ ತಂತ್ರಿ ಅವರ ನೇತೃತ್ವದಲ್ಲಿ ದೇವಸ್ಥಾನದ ಪವಿತ್ರಪಾಣಿ ವೆಂಕಟ್ರಮಣ ಕುದ್ರೆತ್ತಾಯ, ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ ಸೇರಿದಂತೆ ಅರ್ಚಕ ವೃಂದದ ನೇತೃತ್ವದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಕಲಶಾಭಿಷೇಕ, ಸತ್ಯನಾರಾಯಣ ಪೂಜೆ, ಆಶ್ಲೇಷ ಬಲಿ, ಕಲಶಾಭಿಷೇಕ, ತಂಬಿಲ, ಸದಾಶಿವ ದೇವರಿಗೆ ಮಹಾಪೂಜೆ ಸೇರಿದಂತೆ ವೈದಿಕ ಕಾರ್ಯಕ್ರಮಗಳು ನಡೆದವು. ಬಳಿಕ ಅನ್ನಸಂತರ್ಪಣೆ ನಡೆಯಿತು.
ಉತ್ಸವ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಪ್ರಧಾನ ಕಾರ್ಯದರ್ಶಿ ಶಶಿ ಕುಮಾರ್ ಅಂಬಾ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಶೀನಪ್ಪ ಗೌಡ ವಳಕಡಮ, ಬೈಲುವಾರು ಸಮಿತಿ ಸಂಚಾಲಕ ಭವಿತ್‌ರಾಜ್ ಪಟ್ಟೆ, ಉತ್ಸವ ಸಮಿತಿ ಉಪಾಧ್ಯಕ್ಷರಾದ ಧರ್ಣಪ್ಪ ಗೌಡ ಕೊರಿಕ್ಕಾರು, ಚಂದ್ರಹಾಸ ರೈ ಬುಡಲೂರು, ಮೋಹನದಾಸ ಶೆಟ್ಟಿ ಬಡಿಲ, ರಾಜೀವ ಗೌಡ ಪೊಸಲಕ್ಕೆ, ದಾಮಣ್ಣ ಗೌಡ ಕಾಯರಟ್ಟ, ಕಾರ್ಯದರ್ಶಿಗಳಾದ ಶಾಂತರಾಮ ಬೆಂಗದಪಡ್ಪು, ತಿಮ್ಮಪ್ಪ ಸಂಕೇಶ, ಉತ್ಸವ ಸಮಿತಿ ಸದಸ್ಯರಾದ ಮೋಹಿನಿ ಪಾನ್ಯಾಲು, ಮುರಳಿಕೃಷ್ಣ ಬಡಿಲ, ವಿನಯ ಕುಮಾರ್ ರೈ ಕೊಯಿಲ ಪಟ್ಟೆ, ಶ್ರೀರಾಮ ಕೆಮ್ಮಾರ, ಸಂಜೀವ ಗೌಡ
ಕೊನೆಮಜಲು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.