ADVERTISEMENT

ಕೆಎಂಸಿಯಲ್ಲಿ ಬ್ರೆಸ್ಟ್ ವೆಲ್‌ನೆಸ್ ಸೆಂಟರ್

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 16:12 IST
Last Updated 18 ಅಕ್ಟೋಬರ್ 2024, 16:12 IST
ಬ್ರೆಸ್ಟ್ ವೆಲ್‌ನೆಸ್ ಸೆಂಟರ್‌ನ ಜಾಗೃತಿ ಪೋಸ್ಟರ್ ಬಿಡುಗಡೆಗೊಳಿಸಲಾಯಿತು
ಬ್ರೆಸ್ಟ್ ವೆಲ್‌ನೆಸ್ ಸೆಂಟರ್‌ನ ಜಾಗೃತಿ ಪೋಸ್ಟರ್ ಬಿಡುಗಡೆಗೊಳಿಸಲಾಯಿತು   

ಮಂಗಳೂರು: ಇಲ್ಲಿನ ಡಾ. ಅಂಬೇಡ್ಕರ್ ವೃತ್ತದ ಸಮೀಪ ಇರುವ ಕೆಎಂಸಿ ಆಸ್ಪತ್ರೆಯು ಸ್ತನ ಕ್ಯಾನ್ಸರ್ ಜಾಗೃತಿ ಮಾಸಾಚರಣೆ ಅಂಗವಾಗಿ ಬ್ರೆಸ್ಟ್ ವೆಲ್‌ನೆಸ್ ಸೆಂಟರ್ ಪ್ರಾರಂಭಿಸಿದೆ ಎಂದು ಕ್ಯಾನ್ಸರ್ ತಜ್ಞ ಡಾ. ಸಾನ್ಯೊ ಡಿಸೋಜ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಎಂಸಿ ಆಸ್ಪತ್ರೆಯಲ್ಲಿರುವ ಸೆಂಟರ್‌ನ 18001025555 ಈ ಸಂಖ್ಯೆಗೆ ಕರೆ ಮಾಡಿ, ಮಹಿಳೆಯರು ತಪಾಸಣೆಗೆ ಬರಬಹುದು. 40 ವರ್ಷ ಮೇಲ್ಪಟ್ಟ ಮಹಿಳೆಯರು ಸ್ತನ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಒಂದನೇ ಹಾಗೂ ಎರಡನೇ ಹಂತದಲ್ಲಿ ರೋಗ ಪತ್ತೆಯಾದರೆ, ಬೇಗ ಚಿಕಿತ್ಸೆ ನೀಡಿ ಸಂಪೂರ್ಣ ಗುಣಪಡಿಸಬಹುದು. ಭಯದ ಕಾರಣಕ್ಕೆ ತಪಾಸಣೆ ನಿರ್ಲಕ್ಷಿಸಬಾರದು’ ಎಂದರು.

ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ ಡಾ. ಕಾರ್ತಿಕ್ ಕೆ.ಎಸ್ ಮಾತನಾಡಿ, ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದರೆ, ಶೇ 90ರಷ್ಟು ಸ್ತನ ಕ್ಯಾನ್ಸರ್ ಪ್ರಕರಣ ಗುಣಪಡಿಸಲು ಸಾಧ್ಯವಿದೆ ಎಂದರು.

ADVERTISEMENT

ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ ಡಾ. ಹರೀಶ್ ಇ ಮಾತನಾಡಿ, ಸ್ತನ ಕ್ಯಾನ್ಸರ್‌ ಬಂದರೆ, ಸ್ತನವನ್ನು ಕತ್ತರಿಸಿ ತೆಗೆಯಲಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಸುಧಾರಿತ ಶಸ್ತ್ರಚಿಕಿತ್ಸಾ ಪದ್ಧತಿಯಲ್ಲಿ ಸ್ತನದೊಳಗಿನ ಗಂಟನ್ನು ಮಾತ್ರ ತೆಗೆದು, ಸ್ತನವನ್ನು ಹಾಗೆಯೇ ಉಳಿಸಬಹುದು ಎಂದರು.

ಸ್ತನ ಕ್ಯಾನ್ಸರ್‌ನಿಂದ ಗುಣಮುಖರಾಗಿರುವ ಕವಿತಾ ತಮ್ಮ ಅನುಭವ ಹಂಚಿಕೊಂಡರು. ಡಾ. ಬಾಸಿಲಾ ಅಲಿ, ಆಸ್ಪತ್ರೆಯ ಪ್ರಾದೇಶಿಕ ಆಡಳಿತಾಧಿಕಾರಿ ಸಗೀರ್ ಸಿದ್ದಕಿ ಇದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.