ADVERTISEMENT

ಬಜೆಟ್‌: ಕರಾವಳಿ ಭಾಗಕ್ಕೆ ಸಿಕ್ಕಿಲ್ಲ ಆದ್ಯತೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 7:36 IST
Last Updated 24 ಜುಲೈ 2024, 7:36 IST
<div class="paragraphs"><p>ಬಜೆಟ್‌ ಪ್ರತಿ ಇರುವ ಟ್ಯಾಬ್‌ನೊಂದಿಗೆ ಸಂಸತ್‌ ಭವನಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್</p></div>

ಬಜೆಟ್‌ ಪ್ರತಿ ಇರುವ ಟ್ಯಾಬ್‌ನೊಂದಿಗೆ ಸಂಸತ್‌ ಭವನಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

   

ರಾಯಿಟರ್ಸ್

ಮಂಗಳೂರು: ಕೇಂದ್ರದ 2024–25ನೇ ಸಾಲಿನ ಮಧ್ಯಂತರ ಬಜೆಟ್‌ನಲ್ಲಿ ರಾಜ್ಯದ ಕರಾವಳಿ ಭಾಗಕ್ಕೆ ಆದ್ಯತೆ ನೀಡುವ ಯಾವುದೇ ಕಾರ್ಯಕ್ರಮಗಳನ್ನು ಪ್ರಕಟಿಸಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ. 

ADVERTISEMENT

ಬಜೆಟ್‌ನಲ್ಲಿ ಘೋಷಿಸಿರುವ ಕೆಲವು ಯೋಜನೆಗಳ ಬಗ್ಗೆ ಮೆಚ್ಚುಗೆ ಸೂಚಿಸಿರುವ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ), ‘ನಮ್ಮ ಪ್ರದೇಶದಲ್ಲಿ ಸಕಾರಾತ್ಮಕ ಪರಿಣಾಮ ಬೀರುವಂತಹ ಮಹತ್ತರ ಪ್ರಸ್ತಾವಗಳು ಈ ಬಜೆಟ್‌ನಲ್ಲಿ ಇಲ್ಲ’ ಎಂಬುದನ್ನೂ  ಬೊಟ್ಟು ಮಾಡಿದೆ. 

‘ಬಡವರು, ಮಹಿಳೆಯರು, ಯುವಜನರು ಹಾಗೂ ಕೃಷಿಕರಿಗೆ ಆದ್ಯತೆ ನೀಡಲಾಗಿದೆ. ಬಂಡವಾಳ ವೆಚ್ಚಕ್ಕೆ ಒಟ್ಟು ಆಂತರಿಕ ಉತ್ಪನ್ನದ ಶೇ 3.4ರಷ್ಟು ಮೊತ್ತವನ್ನು ಕಾಯ್ದಿರಿಸಲಾಗಿದ್ದು ಹಾಗೂ ವಿತ್ತೀಯ ಕೊರತೆಯನ್ನು ಶೇ 5.1ರಿಂದ ಶೇ 4.9ಕ್ಕೆ ಇಳಿಸುವ ಗುರಿ ಹೊಂದಿರುವುದು ಸ್ವಾಗತಾರ್ಹ’ ಎಂದು ಕೆಸಿಸಿಐ ತಿಳಿಸಿದೆ.

‘ಸೀಗಡಿ ಕೃಷಿ ಮತ್ತು ಸಂಸ್ಕರಣೆ ಹಾಗೂ ರಫ್ತಿಗೆ ನಬಾರ್ಡ್‌ ಮೂಲಕ ಆರ್ಥಿಕ ನೆರವು ಒದಗಿಸುವ ಕಾರ್ಯಕ್ರಮದಿಂದ ಇಲ್ಲಿನವರಿಗೂ ಪ್ರಯೋಜನವಾಗಲಿದೆ. ಸೀಗಡಿ ಆಹಾರ ಮತ್ತು ಮೀನು ಆಹಾರಗಳ ಮೇಲೆ ಮೂಲ ಕಸ್ಟಮ್ಸ್ ತೆರಿಗೆ ಕಡಿತದಿಂದ ಈ ಭಾಗದ ಕೆಲವು ಸಾಗರೋತ್ಪನ್ನ ಆಧರಿತ ಆಹಾರೋದ್ಯಮಗಳಿಗೆ ನೆರವಾಗಲಿದೆ.’  

ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಕಾರ್ಯಕ್ರಮದಡಿ ದೇಶದಾದ್ಯಂತ 12 ಹೆಚ್ಚುವರಿ ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸುವಾಗ ನಮ್ಮ ಪ್ರದೇಶವನ್ನೂ ಪರಿಗಣಿಸಬೇಕು ಎಂದು ಕೆಸಿಸಿಐ ಅಧ್ಯಕ್ಷ ಅನಂತೇಶ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಮುಖಂಡರು ಬಜೆಟ್‌ನ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ರಾಜ್ಯವನ್ನು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಕಡೆಗಣಿಸಲಾಗಿದೆ’ ಎಂದು ಕಾಂಗ್ರೆಸ್ ಮುಖಂಡರು ಟೀಕಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.