ADVERTISEMENT

ಜೆಇಇ ಅಡ್ವಾನ್ಸ್ಡ್‌: ಸಿಎಫ್‌ಎಲ್‌ ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2023, 13:49 IST
Last Updated 23 ಜೂನ್ 2023, 13:49 IST
ಕೇತನ್ ಸುಮನ್‌, ಅಫ್ಫಾನ್ ಅರ್ಷದ್
ಕೇತನ್ ಸುಮನ್‌, ಅಫ್ಫಾನ್ ಅರ್ಷದ್   

ಮಂಗಳೂರು: ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆಯಲ್ಲಿ ಇಲ್ಲಿಯ ಸೆಂಟರ್ ಫಾರ್ ಅಡ್ವಾನ್ಸ್ಡ್ ಲರ್ನಿಂಗ್ (ಸಿಎಫ್‌ಎಎಲ್‌) ಸಂಸ್ಥೆಯ 24 ವಿದ್ಯಾರ್ಥಿಗಳು ಅತ್ಯುತ್ತಮ ರ‍್ಯಾಂಕ್ ಪಡೆದಿದ್ದಾರೆ.

ಅಖಿಲ ಭಾರತ ಮಟ್ಟದಲ್ಲಿ ಕೇತನ್ ಸುಮನ್‌ 1923, ಅಫ್ಫಾನ್ ಅರ್ಷದ್ 3982 ರ‍್ಯಾಂಕ್‌ ಪಡೆದಿದ್ದಾರೆ. ಹಾಗೂ ಇವರಿಬ್ಬರೂ ಒಬಿಸಿ ಕೆಟಗರಿಯಲ್ಲಿ ಕ್ರಮವಾಗಿ 331, 753 ರ‍್ಯಾಂಕ್‌ ಪಡೆದಿದ್ದಾರೆ.

ಸಮಂತ್ ಮಾರ್ಟಿಸ್ 2500, ಅನನ್ಯ 3087, ಶಶಾಂಕ್ 3468, ಅಂಕಿತ್ ಕಿಣಿ 3753, ಅಚಿಂತ್ಯ ರಾಘವನ್ 5541, ವರುಣ್ ಆಚಾರ್ಯ 6089, ಆದಿತ್ಯ ರವೀಂದ್ರ 7495, ವಸಂತ ಪ್ರಭು ಕುಂಬ್ಳೆ 8466, ಪ್ರಮಥ ರಾವ್ 9793, ಅನನ್ಯ ಬಾಳಿಕೆ 9859 ಹಾಗೂ ಆರ್. ರಿಕಿ ರೋಜರ್,  ಶಿಶಿರ ಅಗ್ಗಿತ್ತಾಯ, ಮೇಧಾಂಶ ಶೆಟ್ಟಿ, ನಿನಾದ್ ಶ್ರೀನಿವಾಸ ರಾವ್, ಧ್ರುವ ರಮೇಶ್ ಜೋಷಿ,  ಹರ್ಷಿತ್ ಕೃಷ್ಣ ಆರ್,  ಜೈತೇಗ್ ಸಿಂಗ್ ದಿಲ್., ಅಖಿಲ್ ಮೆನನ್, ಯಶಸ್ವಿನಿ ಕೆ, ರಜತ್ ಜಿ ಎ, ಅದ್ನಾನ್ ದಾವೂದ್, ವಿಜೀತ್ ಜೆ ಪೂಜಾರಿ ಅವರು ಉತ್ತಮ ಅಂಕ ಪಡೆದಿದ್ದಾರೆ ಎಂದು
ಸಿಎಫ್‌ಎಎಲ್‌ನ ಕಾರ್ಯಕ್ರಮ ಸಂಯೋಜಕ ವಿಜಯ್ ಮೊರಾಸ್‌ ತಿಳಿಸಿದ್ದಾರೆ.

ADVERTISEMENT

ಎಇಇ ಅಡ್ವಾನ್ಸ್ಡ್ ಮಹತ್ವಾಕಾಂಕ್ಷಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅತ್ಯಂತ ಸವಾಲಿನ ಪರೀಕ್ಷೆಯಾಗಿದ್ದು, ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ ಅವರ ಪ್ರವೇಶವನ್ನು ನಿರ್ಧರಿಸುತ್ತದೆ.

ಭಾರತದಾದ್ಯಂತ ಎಲ್ಲಾ 23 ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಐಐಟಿ)
ಒಟ್ಟು 17,385 ಸೀಟುಗಳು ಈಗ ಲಭ್ಯ ಇವೆ. ಕಳೆದ ವರ್ಷ ಒಟ್ಟು 16,598 ಸೀಟುಗಳು ಇದ್ದವು ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.