ADVERTISEMENT

ಕುಕ್ಕೆ: ಕ್ಲೋರಿನ್ ಸೋರಿಕೆ, ಮನೆ ತೊರೆದ ನಿವಾಸಿಗಳು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 10:48 IST
Last Updated 30 ಅಕ್ಟೋಬರ್ 2019, 10:48 IST
ಕಲ್ಲಪಣೆಯಲ್ಲಿರುವ ಕುಡಿಯುವ ನೀರು ಶುದ್ಧೀಕರಣ ಘಟಕ
ಕಲ್ಲಪಣೆಯಲ್ಲಿರುವ ಕುಡಿಯುವ ನೀರು ಶುದ್ಧೀಕರಣ ಘಟಕ   

ಸುಬ್ರಹ್ಮಣ್ಯ: ಪಟ್ಟಣದ ಕಲ್ಲಪಣೆಯಕುಡಿಯುವ ನೀರಿನ ಜಲಸಂಗ್ರಹ, ಶುದ್ಧೀಕರಣ ಘಟಕದಲ್ಲಿ ಕ್ಲೋರಿನ್‌ ಸೋರಿಕೆ ಉಂಟಾಗಿ ಆಸುಪಾಸಿನ ನಿವಾಸಿಗಳಲ್ಲಿ ಉಸಿರಾಟದ ತೊಂದರೆ ಕಂಡು ಬಂದು, ಮನೆ ತೊರೆದ ಪ್ರಕರಣ ನಡೆದಿದೆ.

ಕುಡಿಯುವ ನೀರು ಶುದ್ಧೀಕರಣ ಘಟಕದ ಸಿಲಿಂಡರ್‌ನಲ್ಲಿ ಸೋಮವಾರ ತಡರಾತ್ರಿ ಕ್ಲೋರಿನ್ ಸೋರಿಕೆಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿಕಾರ್ಯಾಚರಣೆಯಿಂದ ಮಂಗಳವಾರ ಬೆಳಗಿನ ಜಾವ ಪರಿಸ್ಥಿತಿ ಸುಧಾರಿಸಿದೆ. ಘಟಕದಿಂದ ದುರ್ವಾಸನೆ ಹೊರಬಂದು, ಗಾಳಿಯಲ್ಲಿ ಸೇರಿ ಪರಿಸರದಲ್ಲಿ ಪಸರಿಸಿತ್ತು.

ಗ್ಯಾಸ್ ಸೋರಿಕೆಯ ವಾಸನೆ ಜತೆಗೆ ಸುತ್ತಮುತ್ತಲಿನ ಪರಿಸರದ ನಿವಾಸಿಗಳಲ್ಲಿ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದೆ. ಆತಂಕಗೊಂಡ ಸ್ಥಳಿಯ ನಿವಾಸಿಗಳೆಲ್ಲರೂ ರಾತ್ರಿ ಮನೆ ತೊರೆದು ಬಂದಿದ್ದಾರೆ. ಈ ಸಮಯ ಘಟಕದಲ್ಲಿ ಇಬ್ಬರು ಸಿಬ್ಬಂದಿ ಕರ್ತವ್ಯದಲ್ಲಿದ್ದರು.

ADVERTISEMENT

ದೇವಸ್ಥಾನ ಹಾಗೂ ಪೋಲೀಸರಿಗೆ ವಿಷಯ ತಿಳಿಸಲಾಯಿತು. ಸುಳ್ಯದಿಂದ ಅಗ್ನಿಶಾಮಕ ಸಿಬ್ಬಂದಿ ಬಂದು ಪರಿಶೀಲಿಸಿದರು. ಬೆಳಗ್ಗಿನ 5ರ ಸಮಯದ ಹೊತ್ತಿಗೆ ಪರಿಸ್ಥಿತಿ ಯಥಾಸ್ಥಿತಿಗೆ ಮರಳಿದೆ. ಮನೆಬಿಟ್ಟವರೆಲ್ಲ ಮತ್ತೆ ಮನೆ ಸೇರಿಕೊಂಡರು. ಹಬ್ಬದ ಸಂಭ್ರಮದಲ್ಲಿ ಆತಂಕಗೊಂಡವರು ಬಳಿಕ ಸುಧಾರಿಸಿಕೊಂಡರು.

ನೀರು ಶುದ್ಧೀಕರಣ ಘಟಕದಲ್ಲಿ ಕ್ಲೋರಿನ್ ಸೋರಿಕೆ ಈ ಹಿಂದೆಯೂ ನಡೆದಿತ್ತು. ಸ್ಥಳಕ್ಕೆ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೆರಾಲ್, ದೇಗುಲದ ಎಂಜಿನಿಯರ್ ಉದಯಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.