ADVERTISEMENT

ಮಂಗಳೂರು: ಇಯಾನ್ ಕೇರ್ಸ್‌ನಿಂದ ಸೌಹಾರ್ದ ಕ್ರಿಸ್ಮಸ್ ಆಚರಣೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2024, 6:37 IST
Last Updated 2 ಜನವರಿ 2024, 6:37 IST
ಕಿನ್ನಿಗೋಳಿಯ ಇಯಾನ್ ಕೇರ್ಸ್ ಪೌಂಡೇಷನ್‌ನ ಕ್ರಿಸ್ಮಸ್ ಸೌಹಾರ್ದ ಔತಣಕೂಟದ ಸಭಾ ಕಾರ್ಯಕ್ರಮದಲ್ಲಿ ಮೋಹನ್‌ದಾಸ್ ಸುರತ್ಕಲ್, ಭುವನಾಭಿರಾಮ ಉಡುಪ, ರಾಮಕುಮಾರ್ ಮಾರ್ನಾಡ್, ದೀಪಿಕಾ ಅಂಚನ್ ಪಾಲ್ಗೊಂಡಿದ್ದರು
ಕಿನ್ನಿಗೋಳಿಯ ಇಯಾನ್ ಕೇರ್ಸ್ ಪೌಂಡೇಷನ್‌ನ ಕ್ರಿಸ್ಮಸ್ ಸೌಹಾರ್ದ ಔತಣಕೂಟದ ಸಭಾ ಕಾರ್ಯಕ್ರಮದಲ್ಲಿ ಮೋಹನ್‌ದಾಸ್ ಸುರತ್ಕಲ್, ಭುವನಾಭಿರಾಮ ಉಡುಪ, ರಾಮಕುಮಾರ್ ಮಾರ್ನಾಡ್, ದೀಪಿಕಾ ಅಂಚನ್ ಪಾಲ್ಗೊಂಡಿದ್ದರು   

ಮಂಗಳೂರು: ಕ್ರೈಸ್ತರು ಮತ್ತು ಹಿಂದುಗಳಲ್ಲಿ ಸಾಮಾಜಿಕ, ಐತಿಹಾಸಿಕ, ಪೌರಾಣಿಕ ಸಾಮರಸ್ಯದ ಸಂಬಂಧವಿದೆ ಎಂಬುದನ್ನು ಬಹುತೇಕ ಮಂದಿ ತಿಳಿದುಕೊಂಡಿಲ್ಲ. ಯೇಸುಕ್ರಿಸ್ತ ಮತ್ತು ಕೃಷ್ಣನ ಜನನದ ಸಂದರ್ಭ ಒಂದೇ ರೀತಿ ಇದೆ ಎಂದು ಉಳೆಪಾಡಿ ಶ್ರೀ ದುರ್ಗಾಪರಮೇಶ್ವರಿ ಮಹಮ್ಮಾಯಿ ದೇವಾಲಯದ ಆಡಳಿತ ಸಮಿತಿ ಮುಖ್ಯಸ್ಥ ಮೋಹನ್‌ದಾಸ್ ಸುರತ್ಕಲ್ ಅಭಿಪ್ರಾಯಪಟ್ಟರು.

ಕಿನ್ನಿಗೋಳಿಯ ಇಯಾನ್ ಕೇರ್ಸ್ ಪೌಂಡೇಷನ್‌ನ ಸರ್ವಧರ್ಮ ಸಂಗಮ ವಸತಿ ಕೇಂದ್ರದಲ್ಲಿ ಏರ್ಪಡಿಸಿದ್ದ ಕ್ರಿಸ್ಮಸ್ ಸೌಹಾರ್ದ ಔತಣಕೂಟದಲ್ಲಿ ಮಾತನಾಡಿದ ಅವರು ಯೇಸುಕ್ರಿಸ್ತ ಗೋದಲಿಯೊಂದರಲ್ಲಿ ಜನ್ಮತಾಳಿದ್ದು ಕೃಷ್ಣನ ಜನನ ಮಥುರಾದ ಗೋದಲಿಯಲ್ಲಿ ಆಗಿತ್ತು. ಯೇಸು ಜನಿಸಿದ ಜೆರುಸಲೆಮ್‌ನಲ್ಲಿ ಈಗ ಯುದ್ಧದ ಕರಿಮೋಡ ಕವಿದಿದೆ. ಕೃಷ್ಣನ ಜನ್ಮಸ್ಥಾನದಲ್ಲಿ ಕೃಷ್ಣಾರ್ಪಿತವಾದ ದೇವಾಲಯ ಇನ್ನೂ ಸ್ಥಾಪನೆ ಆಗಲಿಲ್ಲ ಎಂದರು.

ಯುಗಪುರುಷ ಪತ್ರಿಕೆಯ ಸಂಪಾದಕ ಭುವನಾಭಿರಾಮ ಉಡುಪ, ‘ಈ ಪ್ರದೇಶದಲ್ಲಿ  ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಕಚ್ಚಾಟ ನಡೆಯುವುದಿಲ್ಲ. ಆದರೆ ಕೆಲವು ಕಿಡಿಗೇಡಿಗಳು ಸಾಮರಸ್ಯ ಕೆಡಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ದೂರಿದರು.

ADVERTISEMENT

ಮಾದಕ ವ್ಯಸನ ಸಮಾಜಕ್ಕೆ ಅಂಟಿದ ಮಹಾರೋಗ. ಇದಕ್ಕೆ ತುತ್ತಾದವರನ್ನು ಹೊರತರಲು ಪ್ರಯತ್ನ ಆಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಕೇಂದ್ರದ ಕೃಷಿ ವಿಭಾಗದ ಮುಖ್ಯಸ್ಥ ರಾಮಕುಮಾರ್ ಮಾರ್ನಾಡ್ ಸಲಹೆ ನೀಡಿದರು. ಸಂಸ್ಥೆಯ ಪ್ರಭಾರಿ ದೀಪಿಕಾ ಅಂಚನ್ ಕಾರ್ಯಕ್ರಮ ನಡೆಸಿಕೊಟ್ಟರು. ಸಂಯೋಜಕ ಹೇಮಾಚಾರ್ಯ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.